ಕರ್ನಾಟಕ

karnataka

ETV Bharat / state

ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ ಪ್ರಮೋದ್​ ಮುತಾಲಿಕ್

ಮೋದಿ ಕಾಳಜಿ ವಹಿಸಿ ಶ್ರೇಷ್ಠವಾದ, ಅಭಿನಂದನಾಹ೯ ಕೆಲಸ ಮಾಡಿದ್ದಾರೆ. ಯುದ್ಧ ಭೂಮಿಗೆ ಅಲ್ಲಿಂದ ಕರೆತರೋದು ಅಂದ್ರೆ ಅದು ಸಾಮಾನ್ಯ ಅಲ್ಲ ಎಂದು ಶ್ರೀರಾಮ ಸೇನೆ‌ ಮುಖಂಡ ಪ್ರಮೋದ್​ ಮುತಾಲಿಕ್ ತಿಳಿಸಿದ್ದಾರೆ..

pramodh-muthalik
ಪ್ರಮೋದ್​ ಮುತಾಲಿಕ್

By

Published : Mar 11, 2022, 8:03 PM IST

ಬಾಗಲಕೋಟೆ: ನಾವು ಕುಡುಕ ಗಂಡನ ಮದುವೆ ಆಗಿದ್ದೇವೆ. ಬಿಡಂಗಿಲ್ಲ, ಇತ್ತ ಸಂಸಾರನೂ ಮಾಡಂಗಿಲ್ಲ ಎಂದು ಬಿಜೆಪಿಗೆ ಶ್ರೀರಾಮ ಸೇನೆ‌ ಮುಖಂಡ ಪ್ರಮೋದ್​ ಮುತಾಲಿಕ್​ ವ್ಯಂಗ್ಯವಾಡಿದ್ದಾರೆ.

ಅವರು‌ ಇಳಕಲ್​ ಪಟ್ಟಣದಲ್ಲಿ ಶಿವಾಜಿ ಜಯಂತಿ‌ ಅಂಗವಾಗಿ ನಡೆಯುತ್ತಿದ್ದ ಶೋಭಾ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಮಾತನಾಡುತ್ತಾ, ನಾವಂತೂ ಕಾರ್ನರ್ ಟು ಕಾರ್ನರ್ ರಾಜ್ಯಾದ್ಯಂತ ಹೋಗಿ ಬಿಜೆಪಿ ಯಾಕೆ, ಪಿಎಫ್​ಐ, ಸಿಎಫ್ಐ, ಎಸ್​ಡಿಪಿಐ ಬ್ಯಾನ್ ಮಾಡ್ತಿಲ್ಲ ಅಂತಾ ಬಟಾಬಯಲು ಮಾಡಬೇಕಾಗುತ್ತೆ. ಎಸ್​ಡಿಪಿಐ ಮತ್ತು ಪಿಎಫ್​ಐ ಹೇಗೆ ದೇಶದ್ರೋಹಿ?. ಹೇಗೆ ಭಯೋತ್ಪಾಕರ ಜೊತೆ ಕೈಜೋಡಿಸುತ್ತಿದೆ ಅಂತಾ ಸಮಾಜದ ಎದುರುಗಡೆ ಇಡುತ್ತೇವೆ.

ಕುಡುಕ ಗಂಡನನ್ನೇ ಸುಧಾರಿಸಬೇಕು

ಆಗ ಜನ ನಿಶ್ಚಯ ಮಾಡಲಿ. ಇವತ್ತಿನ ರಾಜಕೀಯದಲ್ಲಿ ಪ್ರಾಮಾಣಿಕರಿಗೆ, ಹಿಂದೂ ವಾದಿಗಳಿಗೆ ಬೆಲೆ ಇಲ್ಲದಂತಾಗಿದೆ. ದುಡ್ಡು, ಜಾತಿ, ಗುಂಡಾಗಿರಿ ಲಾಬಿ ಮಾಡುವವರಿಗೆ ಮಾತ್ರ ರಾಜಕೀಯ ಪ್ರವೇಶ ಇದೆ. ನಾವು ಕುಡುಕ ಗಂಡನ ಮದುವೆ ಮಾಡಿಕೊಂಡು ಬಿಟ್ಟಿದ್ದೇವೆ.

ಆ ಪರಿಸ್ಥಿತಿಯಲ್ಲಿ ನಾವು ಇದೀವಿ. ಬಿಡಂಗಿಲ್ಲ, ಸಂಸಾರನೂ ಮಾಡಂಗಿಲ್ಲ. ಕುಡುಕ ಗಂಡನನ್ನೇ ಸುಧಾರಿಸಬೇಕು ಎಂದರು. ಇವರಿಗೆ ಹಿಂದುತ್ವದ ಕೆಲಸ ಮಾಡಬೇಕು. ನೀವೇ ತಿದ್ದಬೇಕು ಅಂತಾ ಒತ್ತಡ ಹೇರಲು ಹಿಂದೂ ಸಮಾಜ ಸಿದ್ದವಾಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಶ್ರೀರಾಮ ಸೇನೆ‌ ಮುಖಂಡ ಪ್ರಮೋದ್​ ಮುತಾಲಿಕ್ ಮಾತನಾಡಿರುವುದು..

ಮೋದಿ ಸಕಾ೯ರ ಉಕ್ರೇನ್​ನಿಂದ ಭಾರತೀಯರನ್ನ ಕರೆತರುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ‌ನೀಡಿ, ಮೋದಿ ಕಾಳಜಿವಹಿಸಿ ಶ್ರೇಷ್ಠವಾದ, ಅಭಿನಂದನಾಹ೯ ಕೆಲಸ ಮಾಡಿದ್ದಾರೆ. ಯುದ್ಧ ಭೂಮಿಗೆ ಅಲ್ಲಿಂದ ಕರೆತರೋದು ಅಂದ್ರೆ ಅದು ಸಾಮಾನ್ಯ ಅಲ್ಲ. ಉಕ್ರೇನ್ & ರಷ್ಯಾ ಅದ್ಯಕ್ಷರ ಜೊತೆ ಮಾತನಾಡಿ ಯುದ್ಧ ನಿಲ್ಲಿಸಿ ವಿದ್ಯಾರ್ಥಿಗಳನ್ನ ಕರೆ ತಂದರು ಎಂದು‌ ತಿಳಿಸಿದರು.

ಭಾರತೀಯರನ್ನ ಕರೆ ತಂದಿದ್ದಕ್ಕೆ ಅಭಿನಂದಿಸುತ್ತೇನೆ

ಮೋದಿ ಅವರು ಗ್ರೇಟ್, ಅವರಿಗೆ ಸಾವಿರ ಸಾವಿರ ಸೆಲ್ಯೂಟ್ ಹೊಡೆಯೋ ಕೆಲಸ ಮಾಡಿದ್ದಾರೆ. ಆದರೆ ಎಲ್ಲೋ ಒಬ್ರು ಹುಚ್ಚನ ತರಹ ಮಾತನಾಡಿದ್ದಾರೆ. ಅಂತವರ ಕಡೆಗೆ ಲಕ್ಷ್ಯ ಕೊಡೋ ಅವಶ್ಯಕತೆ ಇಲ್ಲ ಎಂದು ಸಾವಿರಾರು ಜನ ವಿದ್ಯಾಥಿ೯, ಭಾರತೀಯರನ್ನ ಕರೆ ತಂದಿದ್ದಕ್ಕೆ ಅಭಿನಂದಿಸುತ್ತೇನೆ ಎಂದರು.

ಇದೇ ಸಮಯದಲ್ಲಿ ಮಾತನಾಡಿ, ಸ್ವಾಮೀ, ಬಿಜೆಪಿಯವರೇ ನಿಮಗೇನಾದ್ರೂ ಮಾನ- ಮಯಾ೯ದೆ ಇದೆಯಾ. ನೀವು ದೇಶದ್ರೋಹಿ ಭಯೋತ್ಪಾದಕರನ್ನ ಸಾಕುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸ್‌ಡಿಪಿಐ & ಪಿಎಫ್‌ಐ ಸಂಘಟನೆ ಬ್ಯಾನ್ ಇಲ್ಲ. ನಿಗಾ ಮಾತ್ರ ಇಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಚಾರ ತಿಳಿಸಿದ್ದಾರೆ.

ಕಮ್ಯುನಿಷ್ಟರು ಬ್ಯಾನ್ ಮಾಡಿ ಅಂತಿದ್ದಾರೆ

ಗೃಹ ಮಂತ್ರಿಗಳ ಈ ವಿಚಾರವನ್ನು ನಾನು ಖಂಡಿಸುತ್ತೇವೆ. ಬಿಜೆಪಿಯವರೇ ನೀವು ಈ ಸಂಘಟನೆಗಳ ಮೇಲೆ ನಿಗಾ ಇರಿಸಿದ್ದರೆ ಹಷ೯ನ ಕೊಲೆಯಾಗುತ್ತಿರಲಿಲ್ಲ. ಈ ಹೇಳಿಕೆ ನೀಡಿ ದೇಶದ್ರೋಹಿ ಭಯೋತ್ಪಾದಕರನ್ನ ನೀವು ಸಾಕುತ್ತಿದ್ದೀರಿ. ಇದು ಸರಿಯಲ್ಲ. ಒಂದು ಸಂಸ್ಥೆ ಇಡೀ ದೇಶದಲ್ಲೇ ಭಯೋತ್ಪಾದನೆ ಚಟುವಟಿಕೆ ಮಾಡುತ್ತಿದೆ.

ಹಿಂದೂ ವಿರೋಧಿ, ರಾಷ್ಟ್ರ ವಿರೋಧಿ, ಧಮ೯ ವಿರೋಧಿ ಕೆಲಸ ಮಾಡುತ್ತಿದೆ. ದಾಖಲೆ ಸಮೇತ ಎಲ್ಲ ಇದೆ. ಕಾಂಗ್ರೆಸ್ ಪಕ್ಷದವರು ಸಹ ಬ್ಯಾನ್ ಮಾಡಿ ಅಂತಾ ಹೇಳ್ತಿದ್ದಾರೆ. ಕಮ್ಯುನಿಷ್ಟರು ಬ್ಯಾನ್ ಮಾಡಿ ಅಂತಿದ್ದಾರೆ ಎಂದರು.

ನೀವು ಕಣ್ಣಿಡ್ತಿವಿ ಅಂತಿದ್ದೀರಿ, ಇದನ್ನು ನಾವು ಒಪ್ಪಲ್ಲ ಎಂದು ಎಚ್ಚರಿಕೆ ನೀಡಿದ ಮುತಾಲಿಕ್​, ಬಿಜೆಪಿಯವರಿಗೆ ಹೇಳೋದಿಷ್ಟೇ. ದೇಶದ, ಸಮಾಜದ, ಧಮ೯ದ ಸುರಕ್ಷತೆ ಹಿನ್ನೆಲೆ ಬ್ಯಾನ್ ಮಾಡಿ. ಬ್ಯಾನ್ ಮಾಡದೇ ಹೋದರೆ ಏಪ್ರಿಲ್ ಕೊನೆಯಿಂದ ಇಡೀ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ.

ಬ್ಯಾನ್ ಪಿಎಫ್ಐ ಆಂದೋಲನ ಶುರು ಮಾಡುತ್ತೇವೆ. ದಾಖಲೆಯನ್ನ ಬಿಜೆಪಿಯವರೇ ಬಿಡುಗಡೆ ಮಾಡಿದ್ದಾರೆ‌. ಆದರೆ, ಈಗ ಬಿಜೆಪಿಯವರೇ ಉಲ್ಟಾ ಹೊಡೆಯುತ್ತಿದ್ದೀರಿ. ನೀವೇ ಸಾಪ್ಟ್ ಕಾನ೯ರ್ ಮೂಲಕ ಅವರನ್ನ ಸಾಕುತ್ತಿದ್ದೀರಿ ಅನ್ನೋ ಸಂಶಯ ಕಾಡ್ತಿದೆ.

ಇದನ್ನು ನಾವು ಒಪ್ಪಲ್ಲ ಎಂದು ಮುತಾಲಿಕ್​ ಅಸಮಾಧಾನ ಹೊರ ಹಾಕಿದರು. ಇದೇ ಸಮಯದಲ್ಲಿ ಶಿವಮೊಗ್ಗದಲ್ಲಿ ಹಿಜಾಬ್ ಪರ ಮತ್ತೇ ಪ್ರತಿಭಟನೆ ನಡೆಸಿದ ವಿಚಾರ‌‌‌ವಾಗಿ ಮಾತನಾಡಿ, ಶಿವಮೊಗ್ಗದಲ್ಲಿ ಪ್ರತಿಭಟನೆ ಮಾಡ್ತಾರೆ, ಇವರಿಗೆಷ್ಟು ದಿಮಾಕು & ಸೊಕ್ಕಿದೆ. ಕೋರ್ಟ್​ಗೆ ಹೋದವರು ಯಾರು?

ಪ್ರಜಾಪ್ರಭುತ್ವದ ಮೇಲೆ ದೇಶ ನಡೆಯುತ್ತಿದೆ

6 ಜನ ವಿದ್ಯಾರ್ಥಿಗಳೇ ನೀವೇ ಕೋರ್ಟ್​ಗೆ ಹೋದ್ರಿ. ಕೋರ್ಟ್​ ಸಹ ಇಂಟಿರಿಯಮ್ ಆಡ೯ರ್ ಕೊಟ್ಟಿದೆ. ಪಾಲನೆ ಮಾಡೋದಕ್ಕಾಗಲ್ವಾ,
ಇದು ತಾಲಿಬಾನ್, ಪಾಕಿಸ್ತಾನ, ಅಪಘಾನಿಸ್ತಾನ ಅಲ್ಲ. ಇದು ಭಾರತ ಇದೆ. ಅಂಬೇಡ್ಕರ್ ಬರೆದ ಸಂವಿಧಾನದ ಮೇಲೆ ಪ್ರಜಾಪ್ರಭುತ್ವದ ಮೇಲೆ ದೇಶ ನಡೆಯುತ್ತಿದೆ. ಮಾಜಿ ಸಿಎಂ, ಸಂಸದರು ಇರುವಲ್ಲೇ ಹೊಕ್ಕು ಹೊಡಿತಿವಿ ‌ಅಂತಿದ್ದಾರೆ.

ಇವರನ್ನು ಹದ್ದುಬಸ್ತಿನಲ್ಲಿ ಇಡೋಕಾಗಲ್ವಾ ಎಂದು ಪ್ರಶ್ನೆ ಮಾಡಿ, ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ತಕ್ಕ ಉತ್ತರ ಕೊಡಲು ಸಿದ್ಧವಾಗಿದೆ. ಹಷ೯ನ ಕೊಂದರೆ ಹೆದರೋದಿಲ್ಲ. ಇಂತಹ ಬೇಕಾದಷ್ಟು ಬಲಿದಾನ ಆಗಿವೆ. ಹೆದರುವ ರಕ್ತ ಹಿಂದುಗಳದ್ದಲ್ಲ. ಇಲ್ಲಿ ನಿಮ್ಮ ಆಟ ನಡೆಯೋಲ್ಲ, ಹೇಳಿದಂತೆ ನೀವು ನಡೆದುಕೊಳ್ಳುತ್ತಿಲ್ಲ. ಹಿಜಾಬ್ ಹಿಂದೆ ಪೂವ೯ ನಿಯೋಜಿತ ಪ್ಲ್ಯಾನ್ ಇದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಚೆ೯ಯಾಗುತ್ತಿದೆ. ಇಂದಿನ ಹಿಜಾಬ್ ಪರ ಮುಲ್ಲಾ, ಮೌಲ್ವಿ ಸೇರಿ ಪ್ರತಿಭಟನೆ ಮಾಡೋದು ನೋಡಿದ್ರೆ ಮುಂದೆ ಭಯಾನಕ ದೃಶ್ಯ ಇದೆ ಎನಿಸುತ್ತಿದೆ. ಇವರಿಗೆ ಸಂವಿಧಾನ, ಕಾನೂನು, ಪೊಲೀಸ್ ಠಾಣೆ ಸಂಬಂಧವಿಲ್ಲ. ಶರೀಯಾ, ಹದೀಜ್, ಕುರಾನ್ ಆಧಾರದ ಮೇಲೆ ಈ ದೇಶದ ಆಡಳಿತ ತರಬೇಕೆನ್ನುತ್ತಿದ್ದಾರೆ. ಇದನ್ನು ಹಿಂದೂ ಸಮಾಜ & ಸಕಾ೯ರ ಗಂಭೀರವಾಗಿ ತೆಗೆದುಕೊಳ್ಳಬೇಕು. ಹಷ೯ನ ಕೊಲೆ ನಂತರ ಅಂತ್ಯಕ್ರಿಯೆಯಲ್ಲಿ ತಲವಾರ್ ಹಿಡಿದು ಚಾಲೆಂಜ್ ಮಾಡ್ತಾರೆ. ವ್ಯಕ್ತಿ ಮೇಲೆ ಹಲ್ಲೆ ಮಾಡ್ತಾರೆ. ಇದನ್ನು ನಾವು ಸಹಿಸೋದಿಲ್ಲ ಎಂದು‌ ಮುತಾಲಿಕ್​ ಎಚ್ಚರಿಕೆ ‌ನೀಡಿದರು.

ಓದಿ:'ಕ್ರೀಡಾ ಸೆಸ್ ಜಾರಿಗೊಳಿಸಿ, ಸಾವಿರ ಕೋಟಿ ಅನುದಾನ ಕೊಡಿ': ಪ್ರತಿಪಕ್ಷದ ಬೇಡಿಕೆಗೆ ಆಡಳಿತ ಸದಸ್ಯರ ಬೆಂಬಲ

ABOUT THE AUTHOR

...view details