ಕರ್ನಾಟಕ

karnataka

ETV Bharat / state

ಎಕ್ಸಪ್ರೆಸ್ ಕಾರ್ಗೋ ಸರ್ವಿಸ್... ಅಂಚೆ ಇಲಾಖೆಯ ವೇಗದ ಪಾರ್ಸಲ್ ಸೇವೆ ಆರಂಭ - ETV Bharath Kannada news

ಉತ್ತರ ಕರ್ನಾಟಕದಲ್ಲಿಯೇ ಮೊದಲು ಬಾರಿಗೆ ರೈಲು ಮೂಲಕ ಪಾರ್ಸಲ್ ಅತಿ ವೇಗವಾಗಿ ಮುಟ್ಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

cargo-service
ಅಂಚೆ ಇಲಾಖೆಯ ಕಾರ್ಗೋ ಸರ್ವಿಸ್

By

Published : Dec 21, 2022, 11:56 AM IST

ಅಂಚೆ ಇಲಾಖೆಯ ಕಾರ್ಗೋ ಸರ್ವಿಸ್

ಬಾಗಲಕೋಟೆ:ಕೇಂದ್ರ ಸರ್ಕಾರದ ಪ್ರಧಾನ ಅಂಚೆ ಇಲಾಖೆ ಹಾಗೂ ಭಾರತೀಯ ರೈಲು ಇಲಾಖೆ ವತಿಯಿಂದ ಬಾಗಲಕೋಟೆ ನಗರದಲ್ಲಿ, ಎಕ್ಸಪ್ರೆಸ್ ಕಾರ್ಗೋ ಸರ್ವಿಸ್​ಗೆ ಚಾಲನೆ ನೀಡಲಾಯಿತು. ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ರೈಲು ಮೂಲಕ ಪಾರ್ಸಲ್ ಅತಿ ವೇಗವಾಗಿ ಮುಟ್ಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಧಾರವಾಡದಲ್ಲಿ ಇರುವ ಅಂಚೆ ಇಲಾಖೆಯ ಉತ್ತರ ಕರ್ನಾಟಕ ವಿಭಾಗದ ಜನರಲ್ ಪೊಸ್ಟ್ ಮಾಸ್ಟರ್ ಡಾ.ವಿ ವಿನೋದ ಕುಮಾರ್ ಹಾಗೂ ರೈಲ್ವೆ ಇಲಾಖೆಯ ಹುಬ್ಬಳ್ಳಿ ವಿಭಾಗದ ವಾಣಿಜ್ಯ ವ್ಯವಸ್ಥಾಪಕಿ ಹಾರೀಥಾ ಎಸ್ ಜಂಟಿಯಾಗಿ ಸೇರಿಕೊಂಡು ಬಾಗಲಕೋಟೆ ನಗರದ ರೈಲು ನಿಲ್ದಾಣದಲ್ಲಿ ಪಾರ್ಸಲ್ ರವಾನಿಸುವ ಮೂಲಕ ಚಾಲನೆ ನೀಡಿದರು.

ನಂತರ ಪ್ರಧಾನ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಜ್ಯೋತಿ ಬೆಳೆಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂಚೆ ಇಲಾಖೆಯ ಜನರಲ್ ಪೋಸ್ಟ್ ಮಾಸ್ಟರ್ ಡಾ.ವಿ ವಿನೋದ ಕುಮಾರ ಮಾತನಾಡಿ, ಇಂದಿನ ಆಧುನಿಕ ಯುಗವು ವೇಗವಾಗಿ ಬೆಳೆಯುತ್ತಿರುವ ಹಿನ್ನಲೆಯಲ್ಲಿ ಎಲ್ಲವೂ ವೇಗವಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ರೈಲು ಮೂಲಕ ಅಂಚೆ ಇಲಾಖೆಯ ಪಾರ್ಸಲ್ ಕಳಿಸುವ ಮೂಲಕ ವೇಗವಾಗಿ ಮುಟ್ಟಿಸುವ ಕೆಲಸ ಮಾಡಲಾಗುತ್ತದೆ. ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಅವರ ಆದೇಶದಂತೆ ಕಡಿಮೆ ದರದಲ್ಲಿ ವೇಗವಾಗಿ ಪಾರ್ಸಲ್ ಮುಟ್ಟಿಸುವ ಕೆಲಸ ಮಾಡುತ್ತೇವೆ. ಇಂತಹ ಸೇವೆಯು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರೈಲು ಇಲಾಖೆಯ ವಾಣಿಜ್ಯ ವ್ಯವಸ್ಥಾಪಕಿ ಹಾರೀಥಾ ಎಸ್ ಮಾತನಾಡಿ, ಅಂಚೆ ಇಲಾಖೆ ಹಾಗೂ ರೈಲ್ವೆ ಇಲಾಖೆಯ ಸಹಯೋಗದಿಂದ ದೇಶದ ಯಾವುದೇ ಪ್ರದೇಶದಲ್ಲಿಯೂ ಪಾರ್ಸಲ್ ಮುಟ್ಟಿಸುವಂತಹ ಕೆಲಸ ಮಾಡಲಾಗುತ್ತದೆ. ಎಷ್ಟೇ ಭಾರವಾದ ವಸ್ತುಗಳು ಇದ್ದರೂ, ಕಡಿಮೆ ದರದಲ್ಲಿ ಕಡಿಮೆ‌ ಅವಧಿಯಲ್ಲಿ ಮುಟ್ಟಿಸುವ ಮೂಲಕ‌ ಕೇಂದ್ರ ಸರ್ಕಾರದ ಹೊಸ ಯೋಜನೆ ಮಾಡಿದೆ. ಇದರ ಸದುಪಯೋಗವನ್ನು ಈ ಭಾಗದ ಜನತೆ ಪಡೆದುಕೊಳ್ಳಬಹುದು ಎಂದರು.

ಇದನ್ನೂ ಓದಿ:ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಭಾರಿ ಉದ್ಯೋಗಾವಕಾಶ

ABOUT THE AUTHOR

...view details