ಬಾಗಲಕೋಟೆ :ಬಾದಾಮಿ ತಾಲೂಕಿನ ಹಾನಾಪೂರ ಎಸ್ಪಿ ತಾಂಡಾದಲ್ಲಿ ಅಕ್ರಮ ಕಳ್ಳಬಟ್ಟಿ ಸಾರಾಯಿ ತಯಾರಿಸುತ್ತಿರುವ ಕೇಂದ್ರದ ಮೇಲೆ ಪೊಲೀಸರು ದಾಳಿ ಮಾಡಿ ಕಳ್ಳಭಟ್ಟಿಯನ್ನು ನಾಶ ಪಡಿಸಿದ್ದಾರೆ.
ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ: 200 ಲೀಟರ್ ಕಳ್ಳಭಟ್ಟಿ ನಾಶ - latest illigal alcohal news in baglkot
ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಹಾನಾಪೂರ ತಾಂಡಾದಲ್ಲಿ ಸುಮಾರು 200 ಲೀಟರ್ನಷ್ಟು ಕಳ್ಳಭಟ್ಟಿ ಸಾರಾಯಿ ಸಂಗ್ರಹ ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಲಕ್ಷ್ಮೀಕಾಂತ ಬನ್ನಿಕೊಳ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಕೊಳೆ ನಾಶ ಪಡಿಸಿದ್ದಾರೆ.
ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ
ಗುಳೇದಗುಡ್ಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಹಾನಾಪೂರ ತಾಂಡಾದಲ್ಲಿ ಸುಮಾರು 200 ಲೀಟರ್ನಷ್ಟು ಕಳ್ಳಭಟ್ಟಿ ಸಾರಾಯಿ ಸಂಗ್ರಹ ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಲಕ್ಷ್ಮೀಕಾಂತ ಬನ್ನಿಕೊಳ ಅವರ ನೇತೃತ್ವದಲ್ಲಿ ದಾಳಿ ನಡೆಸಿ ನಾಶ ಪಡಿಸಿದ್ದಾರೆ.
ಸದ್ಯ ಆರೋಪಿಗಳು ಪರಾರಿಯಾಗಿದ್ದು, ಅಕ್ರಮ ತಯಾರಿಕೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.