ಬಾಗಲಕೋಟೆ:ಅನಗತ್ಯವಾಗಿ ಬೈಕ್ ಮೇಲೆ ಸಂಚಾರ ಮಾಡುತ್ತಿರುವವರಿಗೆ ಕೈ ಮುಗಿದು ಹೂರಗೆ ಬರಬೇಡಿ ಎಂದು ಪೊಲೀಸ್ ಸಿಬ್ಬಂದಿಯೇ ಮನವಿ ಮಾಡಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಮನೆ ಬಿಟ್ಟು ಹೊರ ಬರಬೇಡಿ: ಕೈ ಮುಗಿದು ಬೇಡಿಕೊಂಡ ಪೊಲೀಸ್ ಸಿಬ್ಬಂದಿ - ಬಾಗಲಕೋಟೆ ಪೊಲೀಸ್
ಲಾಕ್ಡೌನ್ ಹಿನ್ನೆಲೆ ಮನೆ ಬಿಟ್ಟು ಅನಗತ್ಯವಾಗಿ ಯಾರೂ ಹೊರ ಬಾರದಂತೆ ಸೂಚಿಸಲಾಗಿದೆ. ಆದರೆ ನಗರದ ಹಲವೆಡೆ ಅನಗತ್ಯವಾಗಿ ವಾಹನಗಳ ಮೇಲೆ ಜನ ತಿರುಗಾಡುತ್ತಿದ್ದಾರೆ.
ಮನಬಿಟ್ಟು ಹೊರಬಂದವರಿಗೆ ಕೈ ಮುಗಿದು ಬೇಡಿಕೊಂಡ ಪೊಲೀಸ್ ಸಿಬ್ಬಂದಿ
ಮನೆಯಿಂದ ಹೂರಗೆ ಬರಬೇಡಿ ಎಂದು ಎಷ್ಟೇ ಮನವಿ ಮಾಡಿಕೊಂಡರೂ ಸಾಧ್ಯವಾಗಿರಲಿಲ್ಲ. ಇದೀಗ ಬಾದಾಮಿ ಪಟ್ಟಣದ ಕಬ್ಬಲಗಿರಿ ಕ್ರಾಸ್ ಬಳಿ ಬೈಕ್ ಮೇಲೆ ಸಂಚಾರ ಮಾಡುತ್ತಿರುವವನ್ನು ತಡೆದು ಅನಗತ್ಯವಾಗಿ ಹೊರಗೆ ಬಾರದಂತೆ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ನೀವು ಹೊರಗೆ ಬರಬೇಡಿ, ಕೊರೊನಾ ಬರದಂತೆ ನಾವು ತಡೆಯುತ್ತೇವೆ ಎಂದು ಪೊಲೀಸ್ ಸಿಬ್ಬಂದಿ ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ. ಅಗತ್ಯ ಇದ್ದಾಗ ಮಾತ್ರ ಹೂರಗೆ ಬನ್ನಿ ಎಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಕೊರೊನಾ ಹರಡದಂತೆ ತಡೆಯಲು ಈ ಪ್ರಯತ್ನಕ್ಕೆ ಮುಂದಾಗಿದ್ದಾರೆ.