ಬಾಗಲಕೋಟೆ : ತಂಬಾಕು, ಅಡಿಕೆ ಮಿಶ್ರಿತ ಮಾರಕ ಗುಟ್ಕಾ ಮಾವ ತಯಾರಿಕೆ ಮಾಡುತ್ತಿರುವ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಮಾರಕ ಗುಟ್ಕಾ ತಯಾರಿಕಾ ಕೇಂದ್ರದ ಮೇಲೆ ಪೊಲೀಸ್ ದಾಳಿ! - Bagalakote Latest Gutka News
ಗುಳೇದಗುಡ್ಡ ಪಟ್ಟಣದ ಜರ್ಲಿಯವರ ಗಲ್ಲಿಯಲ್ಲಿ ತಂಬಾಕು, ಅಡಿಕೆ ಮಿಶ್ರಿತ ಮಾರಕ ಗುಟ್ಕಾ ಮಾವ ತಯಾರಿಕೆ ಮಾಡುತ್ತಿರುವ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಆರೋಪಿಗಳು ವಶಕ್ಕೆ
ವೀರಭದ್ರ ಹಂಡಿ, ಅಶೋಕ ಗಚ್ಚಿನಮನಿ ಹಾಗೂ ಗದಿಗೆಪ್ಪ ನಿಲ್ಲೂಗಲ್ಲ ಎಂಬುವರನ್ನು ಬಂಧಿಸಿದ್ದು, ಕಬ್ಬಿಣದ ಗಿರಣಿ, 4 ಕೆ.ಜಿ ತಂಬಾಕು, 4 ಕೆ.ಜಿ ಅಡಕೆ ಹಾಗೂ 4 ಕೆ.ಜಿ ಸುಣ್ಣ ಮತ್ತು 200 ಮಾವಾ ಇದ್ದ ಪ್ಯಾಕೇಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್. ಪಿ ಲೋಕೇಶ ಜಗಲಸಾರ ಆದೇಶದ ಮೆರೆಗೆ ಸಿಇಎನ್ ಪೋಲಿಸ್ ಠಾಣೆಯ ಅಧಿಕಾರಿ ಎಸ್.ಎಮ್ ತಹಶಿಲ್ದಾರ ನೇತೃತ್ವದ ತಂಡ ದಾಳಿ ಮಾಡಿದ್ದರು. ಈ ಬಗ್ಗೆ ಬಾಗಲಕೋಟೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.