ಬಾಗಲಕೋಟೆ : ಸಿದ್ದರಾಮೋತ್ಸವಕ್ಕೆ ತೆರಳಿದ್ದಾಗ ನಾಪತ್ತೆಯಾಗಿದ್ದ ಬಾಗಲಕೋಟೆ ಮೂಲದ ಗಿರಿಮಲ್ಲ ಖಂಡೇಕರ್ ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ಪತ್ತೆಯಾಗಿದ್ದು, ನಿನ್ನೆ ರಾತ್ರಿ ಕುಟುಂಬವನ್ನು ಸೇರಿದ್ದಾನೆ. ಇದರಿಂದ ಕುಟುಂಬ ಸಂತಸ ವ್ಯಕ್ತಪಡಿಸಿದೆ.
ಸಿದ್ದರಾಮೋತ್ಸವಕ್ಕೆ ಅಡಿಹುಡಿ ಗ್ರಾಮದಿಂದ ಬಸ್ ಮೂಲಕ 50 ಜನ ತೆರಳಿದ್ದರು. ಅವರೋಂದಿಗೆ ಆಗಸ್ಟ್ 3ರಂದು ತೆರಳಿದವನು 4ರ ಸಂಜೆ ಕಾರ್ಯಕ್ರಮ ಮುಗಿದ ನಂತರ ನಾಪತ್ತೆಯಾಗಿದ್ದ. ಮಗ ಕಳೆದು ಹೋದ ಬಗ್ಗೆ ಕುಟುಂಬ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ಸತತ ಹುಡುಕಾಟದಿಂದ ಗಿರಿಮಲ್ಲ ಪತ್ತೆಯಾಗಿದ್ದಾನೆ.
ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಕಾಣೆಯಾಗಿದ್ದ ವ್ಯಕ್ತಿ ಪತ್ತೆ ಸೆಪ್ಟೆಂಬರ್11 ರಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಅಡಿಹುಡಿ ಗ್ರಾಮಕ್ಕೆ ಭೇಟಿ ಕೊಟ್ಟು ಗಿರಿಮಲ್ಲ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಗಿರಿಮಲ್ಲ ಜೀವಂತದ್ದಾನೆ ಅವನಿಗೆ ಏನೂ ಆಗಿಲ್ಲ, ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆದಷ್ಟು ಬೇಗ ನಿಮ್ಮ ಮಗ ಮನೆಗೆ ಬರ್ತಾನೆ ಎಂದು ಸಿದ್ದರಾಮಯ್ಯ ಧೈರ್ಯ ಹೇಳಿದ್ದರು.
27 ಕ್ಕೆ ಮತ್ತೆ ಬರ್ತಿನಿ ಆರ್ಥಿಕ ಸಹಾಯ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಈಗ ತಮ್ಮ ಮಗ ಸಿಕ್ಕಿರುವುದಕ್ಕೆ ಕುಟುಂಬಕ್ಕೆ ಸಂತಸವಾಗಿದೆ.
ಇದನ್ನೂ ಓದಿ :ಸಿದ್ದರಾಮೋತ್ಸವಕ್ಕೆ ತೆರಳಿದ್ದ ಕಾರ್ಯಕರ್ತ ನಾಪತ್ತೆ: ಯುವಕನ ಕುಟುಂಬಕ್ಕೆ ಸಹಾಯದ ಭರವಸೆ