ಕರ್ನಾಟಕ

karnataka

ETV Bharat / state

ಬಾಗಲಕೋಟೆ: ಮದ್ಯಕ್ಕಾಗಿ ಮುಗಿಬಿಳುತ್ತಿರುವ ಮದ್ಯಪ್ರಿಯರು! - ಸಾಮಾಜಿಕ ಅಂತರ

ಮಹಾಲಿಂಗಪುರ ಪಟ್ಟಣದಲ್ಲಿ ಮದ್ಯ ಖರೀದಿಗೆ ಗ್ರಾಹಕರು ಮುಗಿಬಿದ್ದು, ಸಾಮಾಜಿಕ ಅಂತರ ಇಲ್ಲದೆ ಖರೀದಿಸುವ ದೃಶ್ಯ ಕಂಡು ಬಂದಿದೆ.

rush

By

Published : May 4, 2020, 3:24 PM IST

ಬಾಗಲಕೋಟೆ:ಕೊರೊನಾ ವೈರಸ್ ಭೀತಿ ಹಿನ್ನೆಲೆ ಕಳೆದ ನಲವತ್ತು ದಿನಗಳಿಂದ ಬಂದ್ ಆಗಿದ್ದ ವೈನ್ ಶಾಪ್ ಇಂದು ಓಪನ್ ಆಗಿರುವ ಹಿನ್ನೆಲೆ ಬೆಳಗ್ಗೆಯಿಂದಲೇ ಗ್ರಾಹಕರು ಸಾಲುಗಟ್ಟಿ ನಿಂತು ಮದ್ಯ ಖರೀದಿಸಲು‌ ಮುಗಿ ಬಿದ್ದಿದ್ದಾರೆ.

ಬಾಗಲಕೋಟೆ ನಗರದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಖರೀದಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಆದರೆ ಮಹಾಲಿಂಗಪುರ ಪಟ್ಟಣದಲ್ಲಿ ಮದ್ಯ ಖರೀದಿಗೆ ಗ್ರಾಹಕರು ಮುಗಿಬಿದ್ದು, ಸಾಮಾಜಿಕ ಅಂತರ ಇಲ್ಲದೆ ಖರೀದಿಸುವ ದೃಶ್ಯ ಕಂಡು ಬಂದಿದೆ.

ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರದಲ್ಲಿ ಮುಂಜಾನೆಯಿಂದಲೇ ಮದ್ಯ ಖರೀದಿ ಪ್ರಾರಂಭವಾಗಿದೆ. ಗ್ರಾಹಕರು ಮದ್ಯ ಖರೀದಿಯಲ್ಲಿ ತೊಡಗಿರಿರುವ ದೃಶ್ಯ ಸಾಮಾನ್ಯವಾಗಿದೆ.

ABOUT THE AUTHOR

...view details