ಬಾಗಲಕೋಟೆ: ಉಕ್ಕಿ ಹರಿಯುತ್ತಿರುವ ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ರಾಷ್ಟ್ರಪಕ್ಷಿ ನವಿಲನ್ನು ರಕ್ಷಣೆ ಮಾಡಿದ ಘಟನೆ ಬಾದಾಮಿಯ ಚೊಳಚಗುಡ್ಡ ಸೇತುವೆ ಬಳಿ ನಡೆದಿದೆ.
ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನವಿಲನ್ನು ರಕ್ಷಿಸಿದ ಜನರು
ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನವಿಲನ್ನು ನಿಜಲಿಂಗಪ್ಪ ಹುಲ್ಲೂರು, ಯಲ್ಲಪ್ಪ ನಸಬಿ ಎಂಬುವರು ಸೇತುವೆ ಮೇಲಿಂದಲೇ ನಿಂತು ರಕ್ಷಣೆ ಮಾಡಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.
ಮಲಪ್ರಭಾ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ನವಿಲನ್ನು ರಕ್ಷಿಸಿದ ಜನರು
ಹಲವು ಗಂಟೆಗಳಿಂದ ಪ್ರಾಣ ರಕ್ಷಣೆಗಾಗಿ ನದಿ ಮಧ್ಯದ ಚಿಕ್ಕ ಮರವೇರಿ ನವಿಲು ಕುಳಿತಿತ್ತು, ನೀರಿನ ಪ್ರಮಾಣ ಹೆಚ್ಚಾದಂತೆ ಮರ ತೇಲಿ ಹೋಗುತ್ತಿತ್ತು. ಪ್ರಾಣ ರಕ್ಷಣೆಗಾಗಿ ಹರಿಯುವ ನದಿಯಲ್ಲೂ ಈಜಲು ಪ್ರಯತ್ನ ಮಾಡುತ್ತಿತ್ತು. ಆದರೆ ರಭಸವಾಗಿ ಹರಿಯುತ್ತಿದ್ದರಿಂದ ಈಜುಲು ಆಗದೇ ನದಿಯಲ್ಲಿ ಕೊಚ್ಚಿ ಹೋಗುತ್ತಿತ್ತು.
ಸೇತುವೆ ಬಳಿ ನವಿಲು ತೇಲಿ ಬಂದಾಗ ನಿಜಲಿಂಗಪ್ಪ ಹುಲ್ಲೂರು, ಯಲ್ಲಪ್ಪ ನಸಬಿ ಎಂಬುವರು ಸೇತುವೆ ಮೇಲಿಂದಲೇ ನಿಂತು ನವಿಲು ರಕ್ಷಣೆ ಮಾಡಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.