ಕರ್ನಾಟಕ

karnataka

ETV Bharat / state

ಆಕಸ್ಮಿಕ ಬೆಂಕಿ : ಸಜ್ಜೆ ಬೆಳೆ ಗೂಡು ಸಂಪೂರ್ಣ ಭಸ್ಮ - ಆಕಸ್ಮಿಕ ಬೆಂಕಿಗೆ ಸಜ್ಜೆ ಬೆಳೆ‌ ನಾಶ

ರೈತ ಕಷ್ಟ ಪಟ್ಟು ಬೆಳೆದ ಬೆಳೆ ಸಂಪೂರ್ಣವಾಗಿ ಬೆಂಗಿಗೆ ಆಹುತಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಶಾಸಕರು ಈ ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ..

Pearl millet crops destroyed in fire
ಆಕಸ್ಮಿಕ ಬೆಂಕಿಗೆ ಸಜ್ಜೆ ಬೆಳೆ‌ ನಾಶ

By

Published : Dec 1, 2021, 12:20 PM IST

ಬಾಗಲಕೋಟೆ :ಆಕಸ್ಮಿಕ ಬೆಂಕಿ ತಗುಲಿ ಸಜ್ಜೆ ಬೆಳೆ ಗೂಡು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಜಿಲ್ಲೆಯ ಇಲಕಲ್ ತಾಲೂಕಿನ ಗುಡೂರ ಎಸ್​​ಬಿ ಗ್ರಾಮದಲ್ಲಿ ನಡೆದಿದೆ.

ಆಕಸ್ಮಿಕ ಬೆಂಕಿ : ಹೊತ್ತಿ ಉರಿಯುತ್ತಿರುವ ಸಜ್ಜೆ ಗೂಡು

ನಿಂಗಣ್ಣ ಆಳಗುಂಡರ ಎಂಬುವರಿಗೆ ಸೇರಿದ ಸಜ್ಜೆ ಬೆಳೆಗೆ ಬೆಂಕಿ ತಗುಲಿದೆ. ಬೆಂಕಿ ಹತ್ತಿದ ಕೂಡಲೇ ಸ್ಥಳೀಯ ಯುವಕರು, ಗ್ರಾಮಸ್ಥರು ಸೇರಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ, ಸಾಧ್ಯವಾಗಲಿಲ್ಲ.

ಕೂಡಲೇ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ಧಾರೆ.

ರೈತ ಕಷ್ಟ ಪಟ್ಟು ಬೆಳೆದ ಬೆಳೆ ಸಂಪೂರ್ಣವಾಗಿ ಬೆಂಗಿಗೆ ಆಹುತಿಯಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ತಹಶೀಲ್ದಾರ್ ಹಾಗೂ ಶಾಸಕರು ಈ ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ABOUT THE AUTHOR

...view details