ಕರ್ನಾಟಕ

karnataka

ETV Bharat / state

ಪಂಚಮಸಾಲಿ ಮೂರನೇ ಪೀಠ ನಿರಾಣಿಗೆ ಮಾತ್ರ ಸೀಮಿತವಲ್ಲ: ಸಂಗನಬಸವ ಸ್ವಾಮೀಜಿ - panchamasali third peetha

ಪಂಚಮಸಾಲಿ ಮೂರನೇ ಪೀಠದ ಅಡಿ ಗೋವಾ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಶಾಖಾಪೀಠ ಸ್ಥಾಪನೆ ಸಾಧ್ಯತೆ ಇದೆ. ಸದ್ಯಕ್ಕೆ ಉಸ್ತುವಾರಿಗಳನ್ನು ನೇಮಕ ಮಾಡಿದ್ದೇವೆ. ಉಸ್ತುವಾರಿಗಳ ಮೂಲಕ ಪಂಚ ರಾಜ್ಯದಲ್ಲಿ ಸಮಾಜ ಸಂಘಟನೆ ಮಾಡುತ್ತೇವೆ. ಐದು ರಾಜ್ಯದ ನಮ್ಮ ಸ್ವಾಮೀಜಿಗಳು ಸಮಾಜದ ಜನರನ್ನು ಸಂಘಟಿಸುತ್ತಾರೆ ಎಂದು ಮೂರನೇ ಪೀಠದ ಸಂಗನಬಸವ ಸ್ವಾಮೀಜಿ ಹೇಳಿದರು.

ಸಂಗನಬಸವ ಸ್ವಾಮೀಜಿ
ಸಂಗನಬಸವ ಸ್ವಾಮೀಜಿ

By

Published : Jul 1, 2022, 12:18 PM IST

ಬಾಗಲಕೋಟೆ: ವಿಜಯಪುರ ಶಾಸಕರಾದ ಯತ್ನಾಳ್ ಅವರಿಗೆ ನೀವು ನಮ್ಮವರು, ನಾವು ನಿಮ್ಮವರು ಎಂದು ಕಿವಿ ಮಾತು ಹೇಳಿದ್ದೇವೆ ಅಂತ ಪಂಚಮಸಾಲಿ ಮೂರನೇ ಪೀಠದ ಸಂಗನಬಸವ ಸ್ವಾಮೀಜಿ ತಿರುಗೇಟು ನೀಡಿ, ನಿರಾಣಿ ಅವರನ್ನ ಹಾಡಿ ಹೊಗಳಿದರು. ಈ ಪೀಠ ನಿರಾಣಿ ಅವರಿಗೆ ಸೀಮಿತವಲ್ಲ, ನಿರಾಣಿ ಅವರ ಮನೆತನದ ಬಗ್ಗೆ ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಅವರು ಸಮಾಜ ಸೇವಕರು, ಅವರ ಮನೆಗೆ ಎಲ್ಲ ಸಮಾಜದ ಸ್ವಾಮೀಜಿಗಳು ಬಂದು ಆಶೀರ್ವಾದ ಮಾಡಿ ಹೋಗುತ್ತಾರೆ. ಎಲ್ಲ ಸ್ವಾಮೀಜಿಗಳನ್ನು ಪ್ರೀತಿಯಿಂದ ಕಾಣುವ ಅಪರೂಪದ ರಾಜಕಾರಣಿ ಎಂದರು.

2ಎ ಮೀಸಲಾತಿ ದೊರಕುವ ಭರವಸೆ ಇದೆ:ಜಿಲ್ಲೆಯ ಜಮಖಂಡಿ ಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ 2ಎ ಮೀಸಲಾತಿ ಹೋರಾಟ ಕುರಿತು ಮಾತನಾಡಿದ ಅವರು, 2ಎ ಮೀಸಲಾತಿ ಹೋರಾಟ ಕೂಡಲಸಂಗಮ ಸ್ವಾಮೀಜಿಗೆ ಅಷ್ಟೇ ಸೀಮಿತವಲ್ಲ. ಹರಿಹರ ಪೀಠ, ಆಲಗೂರ ಪೀಠ ಹಾಗೂ ಒಕ್ಕೂಟದ ಎಲ್ಲ ಮಠಾಧೀಶರು ಬೆಂಬಲ ನೀಡಿದ್ದೇವೆ. ಹೋರಾಟದ ಪಾದಯಾತ್ರೆಯಲ್ಲಿ ನಾವೆಲ್ಲಾ ಭಾಗಿಯಾಗಿದ್ದೇವೆ.

ಒಕ್ಕೂಟದ ಮಠಾಧೀಶರು, ಹರಿಹರ ಪೀಠದ ಸ್ವಾಮೀಜಿಗಳು ಕೂಡಿಕೊಂಡು ಮೂರು ಸಲ ಆಯೋಗಕ್ಕೆ ಭೇಟಿ ನೀಡಿದ್ದೇವೆ. ನಾವು ನಮ್ಮ ಪಂಚಮಸಾಲಿ ಸಮಾಜಕ್ಕೆ ಒಂದೇ ಕೊಡಿ ಅಂತ ಕೇಳಿಲ್ಲ, ಇತರ ಸಮಾಜದವರು ನಮ್ಮ ಸಮಾಜದ ಜೊತೆ ಒಡನಾಡಿಗಳಿದ್ದಾರೆ. ಅವರಿಗೂ ಸವಲತ್ತು ಕೊಡಿ ಎಂದು ಹೇಳಿದ್ದೇವೆ. ಸರ್ಕಾರದ ಮೇಲೆ ನಮಗೆ ಭರವಸೆ ಇದೆ, ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಕೊಟ್ಟೇ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

2ಎ ಮೀಸಲಾತಿ ಹೋರಾಟ ಕುರಿತು ಮಾತನಾಡಿದ ಸಂಗನಬಸವ ಸ್ವಾಮೀಜಿ

ಪಂಚರಾಜ್ಯಗಳಿಗೆ ಉಸ್ತುವಾರಿ ನೇಮಕ:ಇದಕ್ಕೂ ಮುನ್ನ ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಲ ಮಹತ್ವದ ಚರ್ಚೆ ನಡೆಸಲಾಯಿತು. ಇದರ ಜೊತೆಗೆ ಸಮಾಜ ಸಂಘಟನೆ ಹಾಗೂ ಐದು ರಾಜ್ಯಗಳಿಗೆ ರಾಜ್ಯ ಉಸ್ತುವಾರಿ ನೇಮಕ ಮಾಡಲಾಯಿತು. ಪಂಚಮಸಾಲಿ ಮೂರನೇ ಪೀಠದ ಪೀಠಾಧ್ಯಕ್ಷ ಮಹದೇವ ಶಿಚಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖರು ಭಾಗಿಯಾಗಿದ್ದರು.

ಕರ್ನಾಟಕದಿಂದ ಸುರೇಶ್ ಬಿರಾದಾರ್, ಮಹಾರಾಷ್ಟ್ರದಿಂದ ಶಿವಪ್ಪ ತಾವಶಿ, ಆಂಧ್ರದಿಂದ ಅಂಬರೀಶ್ ನಂದವರಂ, ತೆಲಂಗಾಣದಿಂದ ನರಸಿಂಹ, ಗೋವಾದಿಂದ ಶಾಂತವೀರ ಪಾಟೀಲ್ ಎಂಬುವರನ್ನ ಉಸ್ತುವಾರಿಗಳನ್ನಾಗಿ ನೇಮಕ‌ ಮಾಡಿ, ಹೆಸರನ್ನು ಘೋಷಣೆ ಮಾಡಿದರು. ಮೂರನೇ ಪೀಠದ ಅಡಿ ಗೋವಾ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು, ತೆಲಂಗಾಣದಲ್ಲಿ ಶಾಖಾಪೀಠ ಸ್ಥಾಪನೆ ಸಾಧ್ಯತೆ ಇದೆ.

ಸದ್ಯಕ್ಕೆ ಉಸ್ತುವಾರಿಗಳನ್ನು ನೇಮಕ ಮಾಡಿದ್ದೇವೆ. ಉಸ್ತುವಾರಿಗಳ ಮೂಲಕ ಪಂಚ ರಾಜ್ಯದಲ್ಲಿ ಸಮಾಜ ಸಂಘಟನೆ ಮಾಡುತ್ತೇವೆ. ಐದು ರಾಜ್ಯದ ನಮ್ಮ ಸ್ವಾಮೀಜಿಗಳು ಸಮಾಜದ ಜನರನ್ನು ಸಂಘಟಿಸುತ್ತೇವೆ. ನಂತರ ಮೂರನೇ ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆ‌ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:ಇಡಿ ವಿಚಾರಣೆಗೆ ಹಾಜರಾಗಲಿದ್ದಾರೆ ಸಂಜಯ್​ ರಾವುತ್​: ಟ್ವೀಟ್​​ ಮೂಲಕ ಉದ್ದವ್ ಬಂಟನ ಸ್ಪಷ್ಟನೆ

ABOUT THE AUTHOR

...view details