ಕರ್ನಾಟಕ

karnataka

ETV Bharat / state

ಸಹೃದಯ ಮಠಾಧೀಶರ ಒಕ್ಕೂಟದಿಂದ ಸಾವಯವ ಕೃಷಿಕರ ಸಮಾವೇಶ ಆಯೋಜನೆ - ಕನೇರಿ ಸಿದ್ಧಗಿರಿ

ಮಠಗಳಲ್ಲಿ ಕೃಷಿ ತರಬೇತಿಗಳು ನಡೆಯಬೇಕು, ಜೊತೆಗೆ ರೈತರ ಒಕ್ಕೂಟಗಳನ್ನು ಮಾಡಬೇಕು ಎಂದು ಕನೇರಿ ಸಿದ್ಧಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಸಾವಯವ ಕೃಷಿಕರ ಸಮಾವೇಶ
ಸಾವಯವ ಕೃಷಿಕರ ಸಮಾವೇಶ

By

Published : Aug 27, 2020, 2:18 PM IST

ಬಾಗಲಕೋಟೆ: ಜಮಖಂಡಿ ತಾಲೂಕಿನ ಹುಲ್ಯಾಳ ಗುರುದೇವಾಶ್ರಮದಲ್ಲಿ ಸಹೃದಯ ಮಠಾಧೀಶರ ಒಕ್ಕೂಟದ ವತಿಯಿಂದ ಸಾವಯವ ಕೃಷಿಕರ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಾತನಾಡಿದ ಕನೇರಿ ಸಿದ್ಧಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಕೃಷಿಕರನ್ನು ಬಿಟ್ಟು ಋಷಿಗಳು ಬದುಕಲಾಗುವುದಿಲ್ಲ. ಋಷಿಗಳನ್ನು ಬಿಟ್ಟು ಕೃಷಿ ಬದುಕಲಿಕ್ಕೆ ಸಾಧ್ಯವಿಲ್ಲ. ಆದರೆ ಇಂದಿನ ದಿನಗಳಲ್ಲಿ ಕೃಷಿಕರೇ ಕೃಷಿಯಿಂದ ದೂರ ಸರಿಯುತ್ತಿರುವುದು ಆಶ್ಚರ್ಯಕರ ಸಂಗತಿ ಎಂದರು.

ಸಾವಯವ ಆಹಾರ ಪದಾರ್ಥಗಳನ್ನು ಬಳಸುವವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ರಾಸಾಯನಿಕವನ್ನು ಬಳಸಿ ಬೆಳೆಸಿದ ಆಹಾರ ಪದಾರ್ಥಗಳಿಂದ ರೋಗ ನಿರೋಧಕ ಶಕ್ತಿ ಕ್ಷೀಣಿಸುತ್ತದೆ ಎಂದು ಸಮೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಮಠಗಳಲ್ಲಿ ಕೃಷಿ ತರಬೇತಿಗಳು ನಡೆಯಬೇಕು, ಕೃಷಿಯಿಂದ ಮಠಗಳು ದೂರ ಆಗಬಾರದು. ಮಠಗಳಲ್ಲಿ ರೈತರ ಒಕ್ಕೂಟಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಶಿರೋಳದ ಶಂಕರಾರೂಢ ಸ್ವಾಮೀಜಿ, ಹಳಿಂಗಳಿಯ ಶಿವಾನಂದ ಸ್ವಾಮೀಜಿ, ಹಿಪ್ಪರಗಿಯ ಪ್ರಭುಜಿ ಬೆನ್ನಾಳೆ ಮಹಾರಾಜರು, ಸಹಜಾನಂದ ಸ್ವಾಮೀಜಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಉಪಸ್ಥಿತರಿದ್ದರು.

ABOUT THE AUTHOR

...view details