ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಮಳೆಗೆ ಈರುಳ್ಳಿ ಬೆಳೆ ನಾಶ - Bagalkote rain news

ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್ ಬೆಳೆ ಮಳೆಯಿಂದ ಜಲಾವೃತವಾಗಿದೆ. ಬೆಳೆ ಹಾನಿ ಸರ್ವೆ ಕಾರ್ಯ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

ಬಾಗಲಕೋಟೆಯಲ್ಲಿ ಮಳೆಗೆ ಈರುಳ್ಳಿ ಬೆಳೆ ನಾಶ
ಬಾಗಲಕೋಟೆಯಲ್ಲಿ ಮಳೆಗೆ ಈರುಳ್ಳಿ ಬೆಳೆ ನಾಶ

By

Published : Sep 29, 2020, 8:38 PM IST

ಬಾಗಲಕೋಟೆ :ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಈರುಳ್ಳಿ ಬೆಳೆದ ರೈತರ ಕಣ್ಣಿನಲ್ಲಿ ನೀರು ಬರುವಂತಾಗಿದೆ.

ಜಿಲ್ಲಾದ್ಯಂತ ಕಳೆದ‌ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ತಾಲೂಕಿನ ಮನ್ನಿಕಟ್ಟಿ ಗ್ರಾಮದಲ್ಲಿ ಸುಮಾರು ಐದು‌ನೂರು ಹೆಕ್ಟೇರ್​ನಷ್ಟು ಈರುಳ್ಳಿ ಹಾಳಾಗಿದೆ. ಸತತ ಮಳೆಯಿಂದಾಗಿ ಬೆಳೆಯೆಲ್ಲಾ ನೀರು ಪಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಇದರಿಂದ ಒಂದು ಕಡೆ ಮನೆ ಕಳೆದುಕೊಂಡು‌ ಮನೆ ಬಿಟ್ಟು ಬೇರೆ ಕಡೆ ಸ್ಥಳಾಂತರವಾದ್ರೆ, ಹೊಲದಲ್ಲಿ ಬೆಳೆದು ನಿಂತ ಈರುಳ್ಳಿ ಹಾಳಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಮನವಿ ಮಾಡುತ್ತಿದ್ದಾರೆ.

ಜಿಲ್ಲಾದ್ಯಂತ ಸಾವಿರಾರು ಹೆಕ್ಟೇರ್ ಬೆಳೆ ಮಳೆಯಿಂದ ಜಲಾವೃತವಾಗಿದೆ. ಬೆಳೆ ಹಾನಿ ಸರ್ವೆ ಕಾರ್ಯ ಮುಂದುವರೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details