ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯದರ್ಶಿ ಶಿವಯೋಗಿ ಕಳಸದ ಅವರು ಕೂಡಲಸಂಗಮಕ್ಕೆ ಭೇಟಿ ನೀಡಿ, ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಕೂಡಲಸಂಗಮಕ್ಕೆ ಶಿವಯೋಗಿ ಕಳಸದ ಭೇಟಿ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ - ಬಾಗಲಕೋಟೆ ಸುದ್ದಿ
ಬಸವ ಅಂತಾರಾಷ್ಟ್ರೀಯ ಕೇಂದ್ರ, ವಸ್ತು ಸಂಗ್ರಹಾಲಯ, ಪ್ರಗತಿಯಲ್ಲಿರುವ ನಿರ್ಮಾಣ ಕಾಮಗಾರಿಗಳು, ಕಲ್ಯಾಣ ಮಂಟಪ, ಓರಿಯಂಟೇಷನ್ ಕೇಂದ್ರ, ಕೂಡಲ ಸಂಗಮದ ಕಳಸಾ ಮಾರ್ಗದ ಅಭಿವೃದ್ಧಿ ಕಾಮಗಾರಿ, ಐಕ್ಯ ಮಂಟಪ ಹಾಗೂ ದೇವಸ್ಥಾನದ ಶುಚಿತ್ವದ ಬಗ್ಗೆ ಪರಿಶೀಲನೆಯನ್ನು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶಿವಯೋಗಿ ಕಳಸದ ನಡೆಸಿದರು.
ಕೂಡಲಸಂಗಮದ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಿದ ಅಧಿಕಾರಿಗಳು
ಬಸವ ಅಂತಾರಾಷ್ಟ್ರೀಯ ಕೇಂದ್ರ, ವಸ್ತು ಸಂಗ್ರಹಾಲಯ, ಪ್ರಗತಿಯಲ್ಲಿರುವ ನಿರ್ಮಾಣ ಕಾಮಗಾರಿಗಳು, ಕಲ್ಯಾಣ ಮಂಟಪ, ಓರಿಯಂಟೇಷನ್ ಕೇಂದ್ರ, ಕೂಡಲ ಸಂಗಮದ ಕಳಸಾ ಮಾರ್ಗದ ಅಭಿವೃದ್ಧಿ ಕಾಮಗಾರಿ, ಐಕ್ಯ ಮಂಟಪ ಹಾಗೂ ದೇವಸ್ಥಾನದ ಶುಚಿತ್ವದ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ತ್ವರಿತವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದರು.
ಕೊರೊನೊ ಭೀತಿ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಸಹ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿಕೊಂಡು ದೇವರ ದರ್ಶನ ಪಡೆಯುವಂತೆ ಸೂಚನೆ ನೀಡಿದರು.