ಬಾಗಲಕೋಟೆ :ಕೊರೊನಾ ಎರಡನೇ ಅಲೆಯಿಂದಾಗಿ ಮದುವೆ, ಮುಂಜಿ ಹಾಗೂ ಇತರ ಶುಭ ಸಮಾರಂಭಗಳಿಗೆ ಕಡಿವಾಣ ಹಾಕಲಾಗಿದೆ. ಇದರಿಂದ ಮದುವೆ ಸಮಾರಂಭದಲ್ಲಿ ಅಲಂಕಾರ ಮಾಡುತ್ತಿದ್ದ ಕುಟುಂಬದವರು ಈಗ ಬೀದಿಗೆ ಬಿದ್ದಿದ್ದಾರೆ.
ನಗರದ ಗಫಾರ ಹವಾಲ್ದಾರ್ ಎಂಬುವರು ಕಳೆದ 20 ವರ್ಷಗಳಿಂದಲೂ ವಿವಿಧ ಸಭೆ-ಸಮಾರಂಭಗಳಲ್ಲಿ ಅಲಂಕಾರ ಸೇರಿದಂತೆ, ಪೆಂಡಾಲ್ ಹಾಕಿ ವಾರ್ಷಿಕವಾಗಿ ಲಕ್ಷಾಂತರ ರೂಪಾಯಿಗಳ ಆದಾಯ ಪಡೆದುಕೊಳ್ಳುತ್ತಿದ್ದರು.