ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ತಣ್ಣಗಾಗದ ಕೊರೊನಾ: ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ! - Bank seal down

ಒಂದು ದಿನದ ಹಿಂದೆಯಷ್ಟೇ ಬಾಗಲಕೋಟೆ ನಗರದ ಬರೋಡಾ ಬ್ಯಾಂಕ್ ಸಿಬ್ಬಂದಿಗೆ ಸೋಂಕು ಕಾಣಿಸಿತ್ತು. ಬಳಿಕ ಅಲ್ಲಿನ 20 ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಯಿತು. ಹಾಗೆಯೇ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸ್ಟಾಫ್​​ ನರ್ಸ್​ಗೂ ಸೋಂಕು ಕಾಣಿಸಿದ್ದು, ಇದರಿಂದ ಆಸ್ಪತ್ರೆ ಸಿಬ್ಬಂದಿಯಲ್ಲೂ ಆತಂಕ ಉಂಟಾಗಿದೆ.

Number of Coronavirus infections are raising in Bagalkote:
ಬಾಗಲಕೋಟೆಯಲ್ಲಿ ತಣ್ಣಗಾಗದ ಕೊರೊನಾ: ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

By

Published : Jul 4, 2020, 2:42 AM IST

ಬಾಗಲಕೋಟೆ: ಜಿಲ್ಲೆಯಲ್ಲಿ ಕೊರೊನಾ ಕುರಿತು ಚರ್ಚೆ ನಡೆಯುತ್ತಿದೆ. ಬಹುತೇಕರ ಬಾಯಲ್ಲಿ ಸೋಂಕಿತರ ಸಂಖ್ಯೆ ಎಷ್ಟು, ಇವತ್ತು ಎಲ್ಲೆಲ್ಲಿ ಸೋಂಕಿತರು ಕಂಡುಬಂದರು ಎಂಬ ಮಾತುಗಳು ಹೊರ ಬರುತ್ತಿವೆ.

ಸೋಂಕಿತರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಿಂದ ಹೆಚ್ಚು ಸೋಂಕು ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಸದ್ಯ 218 ಜನರಿಗೆ ಸೋಂಕು ತಗಲಿದ್ದು, ಐವರು ಮೃತಪಟ್ಟಿದ್ದಾರೆ. ಎರಡೇ ದಿನದಲ್ಲಿ 28 ಜನರಲ್ಲಿ ಸೋಂಕು ಪತ್ತೆಯಾಗಿದೆ.

ಬಾಗಲಕೋಟೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ. ಅನಿಲ ದೇಸಾಯಿ

ಒಂದು ದಿನದ ಹಿಂದಷ್ಟೆ ಬಾಗಲಕೋಟೆ ನಗರದ ಬರೋಡಾ ಬ್ಯಾಂಕ್ ಸಿಬ್ಬಂದಿಗೆ ಸೋಂಕು ಕಾಣಿಸಿತ್ತು. ಬಳಿಕ ಬ್ಯಾಂಕ್​​ನ ಹಿರಿಯ ಅಧಿಕಾರಿಯ ತಂದೆಗೂ ಸೋಂಕು ತಗಲಿರುವುದು ಪತ್ತೆಯಾಯಿತು. ಬ್ಯಾಂಕ್​ನ ಹಿರಿಯ ಅಧಿಕಾರಿಗೆ ನೆಗೆಟಿವ್ ಬಂದಿದ್ದರೂ ಅವರ ತಂದೆಗೆ ಮಾತ್ರ ಐಎಲ್​​ಐನಿಂದ ಸೋಂಕು ದೃಢಪಟ್ಟಿದೆ.

ಇದೀಗ ಬ್ಯಾಂಕ್​​ ಸಂಪೂರ್ಣ ಬಂದ್ ಮಾಡಿದ್ದು, ಅಲ್ಲಿನ 20 ಸಿಬ್ಬಂದಿಯನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಹಾಗೆಯೇ ಜಿಲ್ಲಾ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸ್ಟಾಫ್​​ ನರ್ಸ್​ಗೂ ಸೋಂಕು ಕಾಣಿಸಿದ್ದು, ಇದರಿಂದ ಆಸ್ಪತ್ರೆ ಸಿಬ್ಬಂದಿಯಲ್ಲೂ ಆತಂಕ ಮೂಡಿದೆ.

ಜಿಲ್ಲೆಯಲ್ಲಿ ಸಮುದಾಯಕ್ಕೆ ಕೊರೊನಾ ಸೋಂಕು ಹರಡಿಲ್ಲ, ಜನತೆ ಆತಂಕಪಡುವ ಅಗತ್ಯವಿಲ್ಲ. ಸೋಂಕಿತರ ಸಂಪರ್ಕದಿಂದ ಕೊರೊನಾ ಹರಡಿದೆ. ಆದರೆ, ಕೆಲವರು ತಮ್ಮ ಪ್ರವಾಸದ ಮಾಹಿತಿ ಸರಿಯಾಗಿ ನೀಡಿಲ್ಲ. ಹೀಗಾಗಿ ಮಾಹಿತಿ ಸಂಗ್ರಹಿಸುವುದು ಸ್ವಲ್ಪ ವಿಳಂಬವಾಗಿದೆ. ಸಂಪರ್ಕಿತರ ಹುಡುಕಾಟ ನಡೆಯುತ್ತಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ಅನಿಲ ದೇಸಾಯಿ ತಿಳಿಸಿದ್ದಾರೆ.

ABOUT THE AUTHOR

...view details