ಕರ್ನಾಟಕ

karnataka

ETV Bharat / state

ಇರುವುದೊಂದೇ ಬೆಂಚ್​.. ನಾಲ್ವರು ಕುಳಿತರೆ ಉಳಿದವರು ನಿಂತೇ ಇರಬೇಕು... ಈ ವ್ಯವಸ್ಥೆ ಇರೋದೆಲ್ಲಿ? - undefined

ಬಾಗಲಕೋಟೆ ಜಿಲ್ಲೆ ನವನಗರದಲ್ಲಿರುವ ಮಿನಿ ವಿಧಾನಸೌಧ ಅವ್ಯವಸ್ಥೆಯ ಆಗರವಾಗಿದ್ದು, ಸರಿಯಾದ ಸೌಲಭ್ಯ ಇಲ್ಲದೇ, ಕಚೇರಿಯ ಕೆಲಸಕ್ಕೆ ಆಗಮಿಸುವ ಜನ ಪರದಾಡುವಂತಾಗಿದೆ.

ಮಿನಿ ವಿಧಾನಸೌಧ

By

Published : May 4, 2019, 2:08 PM IST

ಬಾಗಲಕೋಟೆ:ಜಿಲ್ಲೆಯ ನವನಗರದಲ್ಲಿರುವ ಮಿನಿ ವಿಧಾನಸೌಧ ಅವ್ಯವಸ್ಥೆಯ ಆಗರವಾಗಿದೆ. ಸರಿಯಾದ ಸೌಲಭ್ಯ ಇಲ್ಲದೇ, ಕಚೇರಿಯ ಕೆಲಸಕ್ಕೆ ಆಗಮಿಸುವ ಜನರು ಪರದಾಡುವಂತಾಗಿದ್ದು, ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಿನಿ ವಿಧಾನಸೌಧದಲ್ಲಿ ತಹಶೀಲ್ದಾರರ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ನೋಂದಣಿ ಕಚೇರಿ ಸೇರಿದಂತೆ, ಆಧಾರ್​ ಕಾರ್ಡ್​, ಉತಾರ್, ಮತದಾನ ಗುರುತಿನ ಚೀಟಿ ಹಾಗೂ ಪಿಂಚಣಿ ಮಾಸಾಶನಕ್ಕಾಗಿ ನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸುತ್ತಾರೆ. ಆದರೆ, ಅವರಿಗೆ ಕುಳಿತುಕೊಳ್ಳುವುದಕ್ಕೆ ಸರಿಯಾದ ವ್ಯವಸ್ಥೆ ಸಹ ಇಲ್ಲ.

ಮಿನಿ ವಿಧಾನಸೌಧದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದೆ ಪರದಾಡುತ್ತಿರುವ ಜನರು

ಒಂದು ವಿಭಾಗಕ್ಕೆ ಒಂದೇ ಬೆಂಚ್ ಹಾಕಲಾಗಿದ್ದು, ನಾಲ್ಕು ಜನ ಕುಳಿತುಕೊಂಡರೆ ಮುಗಿಯಿತು, ಉಳಿದವರು ಹಾಗೆ ನಿಲ್ಲಬೇಕು. ಶುದ್ಧ ಕುಡಿವ ನೀರಿನ ಸೌಲಭ್ಯ ಸಹ ಇಲ್ಲ. ಇನ್ನು ಶೌಚಾಲಯವಂತೂ ಇದ್ದೂ ಇಲ್ಲದಂತಾಗಿದೆ. ಶೌಚಾಲಯಕ್ಕೆ ಬೀಗ ಹಾಕಿದ್ದು, ಮಹಿಳೆಯರು ಪರದಾಡುವಂತಾಗಿದೆ.

ಪಾರ್ಕಿಂಗ್​ ವ್ಯವಸ್ಥೆ ಇಲ್ಲದೆ ಕಚೇರಿ ವಾಹನಗಳನ್ನೇ ಮರದ ಕೆಳಗೆ ನಿಲ್ಲಿಸಲಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

For All Latest Updates

TAGGED:

ABOUT THE AUTHOR

...view details