ಕರ್ನಾಟಕ

karnataka

ETV Bharat / state

ಕೋವಿಡ್ ಕೆಂಪು ವಲಯದಿಂದ ಹಳದಿಯತ್ತ ಬಾಗಲಕೋಟೆ ಜಿಲ್ಲೆ

ಕೆಂಪು ವಲಯವಾಗಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಹಾಗಾಗಿ ಜಿಲ್ಲೆ ಹಳದಿ ವಲಯದತ್ತ ಮುಖಮಾಡಿದೆ. ಇದರಿಂದ ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

no-more-corona-cases-found-in-bagalakote-district
ಬಾಗಲಕೋಟೆ ಜಿಲ್ಲೆ

By

Published : May 3, 2020, 10:57 AM IST

ಬಾಗಲಕೋಟೆ :ಕೊರೊನಾ ಹಾಟ್​ಸ್ಪಾಟ್​ ಆಗಿದ್ದ ಜಿಲ್ಲೆಯಲ್ಲಿ ಸದ್ಯ ಸೋಂಕಿತರ ಸಂಖ್ಯೆ ಕಡಿಮೆಯಾಗಿದ್ದು, 4 ಜನ ಗುಣಮುಖರಾಗಿದ್ದಾರೆ. ಇದರಿಂದ ಕೆಂಪು ವಲಯದಲ್ಲಿದ್ದ ಜಿಲ್ಲೆ ಹಳದಿ ವಲಯದತ್ತ ತಿರುಗುತ್ತಿದೆ.

ಜಮಖಂಡಿ ನಗರದಲ್ಲಿ ಮತ್ತೊಂದು ಪಾಸಿಟಿವ್​ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಕೇಂದ್ರ ಬಿಂದುವಾಗಿದ್ದ ಬಾಗಲಕೋಟೆ ಹಳೇ ನಗರದಲ್ಲಿ ಕಳೆದ ಎಪ್ರಿಲ್ 18 ರಿಂದ ಹೊಸ ಪ್ರಕರಣಗಳು ಪತ್ತೆ ಆಗಿಲ್ಲ. ರೋಗಿ-188,9 ವರ್ಷದ ಬಾಲಕಿ, ರೋಗಿ-248, 43 ವರ್ಷದ ಪುರುಷ, ರೋಗಿ-249, 32 ವರ್ಷದ ಮಹಿಳೆ, ರೋಗಿ-251, 39 ವರ್ಷದ ಮಹಿಳೆ ಕೋವಿಡ್-19 ನಿಂದ ಗುಣಮುಖರಾಗಿದ್ದು, ಜಿಲ್ಲಾ ಸರ್ಜನ್ ಡಾ. ಪ್ರಕಾಶ ಬಿರಾದಾರ ಅಭಿನಂದಿಸಿ, ಕಾಣಿಕೆ ನೀಡಿ ಬಿಡುಗಡೆ ಮಾಡಿದರು.

ಕೋವಿಡ್ ಕೆಂಪು ವಲಯದಿಂದ ಹಳದಿ ವಲಯದತ್ತ ಬಾಗಲಕೋಟೆ ಜಿಲ್ಲೆ

122 ಸ್ಯಾಂಪಲ್​ಗಳ ವರದಿ ನೆಗೆಟಿವ್ ಬಂದಿದೆ. ಇದರಲ್ಲಿ ಪತ್ರಕರ್ತರ ವರದಿ ಕೂಡಾ ನೆಗಟಿವ್ ಬಂದಿರುವುದು ಸಮಾಧಾನಕರ ಸಂಗತಿ. ಇನ್ನು 405 ಸ್ಯಾಂಪಲ್ ವರದಿ ಬರಬೇಕಾಗಿದೆ. 1,855 ಜನರನ್ನು ಹೋಮ್​ ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಇಲ್ಲಿಯವರೆಗೆ ಒಟ್ಟು 3,096 ಸ್ಯಾಂಪಲ್ ಕಳುಹಿಸಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 2655 ನೆಗೆಟಿವ್​​ ಪ್ರಕರಣಗಳು, 30 ಪಾಸಿಟಿವ್ ಪ್ರಕರಣಗಳಿವೆ. ಓರ್ವ ವೃದ್ಧ ವ್ಯಕ್ತಿ ಮೃತಪಟ್ಟಿದ್ದು, 6 ವರದಿ ತಿರಸ್ಕಾ ರಗೊಂಡಿವೆ. 10 ಜನ ಗುಣಮುಖರಾಗಿದ್ದು, 198 ಜನರು 28 ದಿನಗಳ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ.

ABOUT THE AUTHOR

...view details