ಕರ್ನಾಟಕ

karnataka

ETV Bharat / state

ನೆರೆ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಗೋವಿಂದ ಕಾರಜೋಳ ಹಾಗೂ ಕೆ ಎಸ್‌ ಈಶ್ಚರಪ್ಪ ಭೇಟಿ.. - ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರ ಭೇಟಿ

ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಗೋವಿಂದ ಕಾರಜೋಳ ಹಾಗೂ ಕೆ ಎಸ್ ಈಶ್ಚರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರ ಸಮಸ್ಯೆ ಆಲಿಸಿ, ಶಾಶ್ವತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಗೋವಿಂದ ಕಾರಜೋಳ ಹಾಗೂ ಕೆ.ಎಸ್.ಈಶ್ಚರಪ್ಪ ಭೇಟಿ

By

Published : Aug 21, 2019, 9:54 PM IST

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಗೋವಿಂದ ಕಾರಜೋಳ ಹಾಗೂ ಕೆ ಎಸ್ ಈಶ್ಚರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ಬಾದಾಮಿ ತಾಲೂಕಿನ ಕೆಲ ಪ್ರದೇಶದಲ್ಲಿ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ, ಶಾಶ್ವತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ನಂತರ ಬಾಗಲಕೋಟೆ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಸಚಿವರಿಗೆ ಜಿಲ್ಲಾಡಳಿತ ವತಿಯಿಂದ ಹಾಗೂ ಅಭಿಮಾನಿಗಳು ಹೂವಿನ ಹಾರವನ್ನು ಹಾಕಿ ಸ್ವಾಗತಿಸಿದರು.

ಪ್ರವಾಹ ಪೀಡಿತ ಪ್ರದೇಶಗಳಿಗೆ ನೂತನ ಸಚಿವರಾದ ಕಾರಜೋಳ ಹಾಗೂ ಕೆ ಎಸ್ ಈಶ್ಚರಪ್ಪ ಭೇಟಿ..

ನಂತರ ನಡೆದ ಸಭೆಯಲ್ಲಿ ಸಚಿವ ಗೋವಿಂದ ಕಾರಜೋಳ‌ ಮಾತನಾಡಿ, ಶತಮಾನಗಳ ಹಿಂದೆ ಕಾಣದಷ್ಟು ಭೀಕರ ಪ್ರವಾಹ ಬಂದಿದ್ದು, ಯುದ್ಧೋಪಾದಿಯಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಬೇಕಾಗಿದೆ. ಬಿದ್ದ ಮನೆಗಳು ಸರಿಯಾಗಿ ಕಟ್ಟಲು ಸಾಧ್ಯವಾಗುವುದಿಲ್ಲ. ಅಂತಹ ಮನೆಗಳನ್ನು ಸಂಪೂರ್ಣ ಬಿದ್ದು ಹೋಗಿವೆ ಎಂದು ಅಧಿಕಾರಿಗಳು ಸರ್ವೆ ಮಾಡಿ ಕಳಿಸಬೇಕು. ಸಂತ್ರಸ್ತರ ಎಲ್ಲಾ ಸೌಲಭ್ಯಗಳನ್ನ ಒದಗಿಸಲು ಸರ್ಕಾರ ಸಿದ್ದವಾಗಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ಮಾಡಿ ಸಂತ್ರಸ್ತರ ಸಮಸ್ಯೆ ಗಳನ್ನು ಆಲಿಸಲು ಕಳಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸಚಿವರಾದ ಕೆ ಎಸ್ ಈಶ್ವರಪ್ಪ ಮಾತನಾಡಿ, ರಾಜಕೀಯ ಮಾಡುವವರು ರಾಜಕೀಯ ಮಾಡಲಿ. ಆದರೆ, ಸಂತ್ರಸ್ತರ ಬಗ್ಗೆ ಯಾರೂ ರಾಜಕೀಯ ಮಾಡದೇ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ಅವರಿಗೆ ಪುನರ್ವಸತಿ ಕಲ್ಪಸಿಕೊಡಬೇಕಾಗಿದೆ. ನಾವು ವಿರೋಧ ಪಕ್ಷದಲ್ಲಿದ್ದಾಗ ಅದೇ ಕೆಲಸ ಮಾಡಿದ್ದೇವೆ. ಆದರೆ, ಕೇಂದ್ರದಿಂದ ಅವರು ಹಣ ತರಲಿಲ್ಲ. ನಾವು 1029 ಕೋಟಿ ಹಣ ಪ್ರವಾಹಕ್ಕಾಗಿ ಕೇಂದ್ರದಿಂದ ತಂದಿದ್ದೇವೆ ಎಂದು ಪಕ್ಕದಲ್ಲಿಯೇ ಕುಳಿತಿರುವ ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್ ಆರ್ ಪಾಟೀಲ್‌ರಿಗೆ ಟಾಂಗ್ ನೀಡಿದರು. ನಂತರ ಮಾತನಾಡಿ, ಅವರು ರಾಜಕೀಯ ಮಾಡಿದರೆ ನಮ್ಗೂ ದೊಡ್ಡ ಪ್ರಮಾಣದಲ್ಲಿ ರಾಜಕೀಯ ಮಾಡಲು ಬರುತ್ತದೆ ಎಂದು ತಿರುಗೇಟು ನೀಡಿದರು.

ABOUT THE AUTHOR

...view details