ಕರ್ನಾಟಕ

karnataka

ETV Bharat / state

ಪುನರ್ವಸತಿ ಕೇಂದ್ರಗಳಲ್ಲಿ ರೆಡ್​ ಕ್ರಾಸ್​ನಿಂದ ಅಗತ್ಯ ವಸ್ತುಗಳ ಪೂರೈಕೆ

ಪಟ್ಟದಕಲ್ಲು ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಇದೀಗ ಪುನರ್ವಸತಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ಪೂರೈಸಲಾಗುತ್ತಿದೆ.

flood

By

Published : Aug 14, 2019, 2:57 PM IST

Updated : Aug 14, 2019, 3:02 PM IST

ಬಾಗಲಕೋಟೆ:ಐತಿಹಾಸಕ ಸ್ಥಳ ಪಟ್ಟದಕಲ್ಲು ಮಲಪ್ರಭಾ ನದಿ ಪ್ರವಾಹದಿಂದ ಸಂಪೂರ್ಣ ಜಲಾವೃತಗೊಂಡಿತ್ತು. ಈಗ ಪ್ರವಾಹ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಸಂಚಾರ ಪ್ರಾರಂಭವಾಗಿದೆ. ಆದರೆ ಸಂತ್ರಸ್ತರು ನಿರಾಶ್ರಿತ ಕೇಂದ್ರದಲ್ಲಿ ವಾಸವಿದ್ದು, ಎಲ್ಲವನ್ನು ಕಳೆದುಕೊಂಡು ಪರದಾಡುವಂತಾಗಿದೆ.

ಈ ನಿರಾಶ್ರಿತ ಕೇಂದ್ರಗಳಿಗೆ, ಬೆಂಗಳೂರಿನ ಪೀಣ್ಯಾ ಜಮಖಾನ ಹಾಗೂ ರೋಟರಿ ಬೆಂಗಳೂರು ಜಾಲಹಳ್ಳಿ ಮತ್ತು ಮಲ್ಲಿಗೆ ಊಟದ ಮನೆ ಬೆಂಗಳೂರು ಅವರು ಕೊಡಮಾಡಿದ ವಸ್ತುಗಳನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬಾಗಲಕೋಟೆ ಜಿಲ್ಲಾ ಘಟಕದಿಂದ ಚೇರ್ಮನ್​ ಆನಂದ ನೇತೃತ್ವದಲ್ಲಿ ಸಂತ್ರಸ್ತರಿಗೆ ವಿತರಿಸಲಾಯಿತು.

ಅವಶ್ಯಕ ವಸ್ತುಗಳ ಪೂರೈಕೆ

ಬಾದಾಮಿ ತಾಲೂಕಿನ ಮಂಗಳಗುಡ್ಡ, ಕಾಟಾಪುರ, ಚಿಮ್ಮಲಗಿ ಹಾಗೂ ಪಟ್ಟದಕಲ್ಲು ಪುನರ್ವಸತಿ ಕೇಂದ್ರಗಳಲ್ಲಿ ಬ್ಲಾಂಕೆಟ್, ಚಾಪೆ, ಪೇಸ್ಟ್-ಬ್ರಶ್, ಸೋಪು, ಬೆಡ್ ಶೀಟ್, ಮಕ್ಕಳ ಬಟ್ಟೆ ಹಾಗೂ ಬಿಸ್ಕೆಟ್ ಗಳನ್ನ ನೀಡಲಾಯಿತು.

ಕಳೆದ 8 ದಿನಗಳಿಂದ ಅವಿರತವಾಗಿ ಜಿಲ್ಲೆಯ ಪ್ರವಾಹ ಪೀಡಿತ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಂದ ಪರಿಹಾರ ಕೇಂದ್ರಗಳಿಗೆ ಹೋಗಿ ಅಲ್ಲಿನ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನ ಪೂರೈಸಲಾಗುತ್ತಿದೆ. ಅಲ್ಲದೆ ಬಳ್ಳಾರಿಯಿಂದ ಪ್ರವಾಹ ಸ್ಥಿತಿಯನ್ನು ನಿಭಾಯಿಸುವ ರೆಡ್ ಕ್ರಾಸ್​ನ ಸರ್ವ ಸೇವಾ ಕಾರ್ಯಕರ್ತರು ಬಂದು ಜಮಖಂಡಿಯಲ್ಲಿ ಸೇವಾ ಕಾರ್ಯ ನಿರ್ವಹಿಸಿದ್ದಾರೆ.

ಇಂದು ರೆಡ್ ಕ್ರಾಸ್ ಸಂಸ್ಥೆಯ ರವಿ ಕುಮಟಗಿ, ಸಂಗಮೇಶ ವೈಜಾಪುರ, ಶ್ರೀಶೈಲ ಬಿರಾದಾರ, ಸಂತೋಷ ದೇಶಪಾಂಡೆ, ಕಿರಣ ನಾಶಿ, ಈರಣ್ಣಾ ಅಥಣಿ, ವೀರೇಶ ರೋಣದ ಸೇರಿದಂತೆ ಮತ್ತಿತರರು ಬಾಗವಹಿಸಿದ್ದರು.

Last Updated : Aug 14, 2019, 3:02 PM IST

ABOUT THE AUTHOR

...view details