ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಕೇಕ್​ ಕತ್ತರಿಸುವ ಮೂಲಕ ನರೇಗಾ ದಿನಾಚರಣೆ... - Narega day celeberation at Bagalkote

ಬಾಗಲಕೋಟೆ ತಾಲೂಕಿನ ಹಾನಾಪೂರ ಎಸ್.ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಕ್​ ಕತ್ತರಿಸುವ ಮೂಲಕ ಮಂಗಳವಾರ ನರೇಗಾ ದಿನಾಚರಣೆ ಆಚರಿಸಲಾಯಿತು.

Narega Day celeberation
ನರೇಗಾ ದಿನಾಚರಣೆ

By

Published : Feb 3, 2021, 9:29 AM IST

ಬಾಗಲಕೋಟೆ: ತಾಲೂಕಿನ ಹಾನಾಪೂರ ಎಸ್.ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಂದ ಕೇಕ್​ ಕತ್ತರಿಸುವ ಮೂಲಕ ಮಂಗಳವಾರ ನರೇಗಾ ದಿನಾಚರಣೆ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಜಿ.ಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ ಮಾತನಾಡಿ, ಗ್ರಾಮಗಳ ಅಭಿವೃದ್ಧಿಗೆ ನರೇಗಾ ಒಂದು ಉತ್ತಮ ಯೋಜನೆಯಾಗಿದೆ. ನರೇಗಾದಿಂದ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಗ್ರಾಮಕ್ಕೆ ಆಸ್ತಿಯಾಗಿ ಪರಿಣಮಿಸಲಿವೆ. ಈ ಯೋಜನೆಯಡಿ ಪುರುಷರಷ್ಟೇ ಸಮಾನವಾದ ಕೂಲಿಯನ್ನು ಮಹಿಳೆಯರಿಗೂ ನೀಡಲಾಗುತ್ತದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.

ನರೇಗಾದಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ದನದ ಕೊಟ್ಟಿಗೆ, ಕೊಳವೆ ಬಾವಿ ಮರುಪೂರಣ ಘಟಕ ನಿರ್ಮಾಣ, ಇಂಗು ಗುಂಡಿ, ಎರೆಹುಳು ಗೊಬ್ಬರ ತೊಟ್ಟಿ, ಸಸಿ ನೆಡುವಿಕೆ, ಶೌಚಾಲಯ ನಿರ್ಮಾಣ, ಕ್ಷೇತ್ರ ಬದು ನಿರ್ಮಾಣ, ಜೈವಿಕ ಗೊಬ್ಬರ ಗುಂಡಿ, ಈರುಳ್ಳಿ ಶೇಖರಣಾ ಗುಂಡಿ, ಹಿಪ್ಪು ನೇರಳೆ ತೋಟ ಸ್ಥಾಪನೆ ನಿರ್ಮಾಣ ಸೇರಿದಂತೆ ಇನ್ನು ಅನೇಕ ಸೌಲಭ್ಯಗಳ ಲಾಭವನ್ನು ಸಾರ್ವಜನಿಕರು ಹಾಗೂ ರೈತರು ಪಡೆದುಕೊಳ್ಳಬೇಕು ಎಂದರು.

ಗ್ರಾಮ ಪಂಚಾಯತ್​​​​ ವ್ಯಾಪ್ತಿಗೆ ಒಳಪಡುವ ಸಣ್ಣ ಮತ್ತು ಅತೀ ಸಣ್ಣ ರೈತರು ಅಡಿಕೆ, ತೆಂಗು, ಗೇರು, ಎಡೆ ಸಸಿ, ಕೋಕೋ, ಕಾಳು ಮೆಣಸು, ವೀಳ್ಯದೆಲೆ, ಬಾಳೆಯಂತಹ ಕೃಷಿ ಚಟುವಟಿಕೆಗಳಿಗೆ ನರೇಗಾ ಯೋಜನೆಯ ಅನುದಾನದಲ್ಲಿ ತೆಗೆದುಕೊಳ್ಳಲು ಅವಕಾಶವಿದ್ದು, ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ ಪಡೆದುಕೊಳ್ಳುವಂತೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಜನ ಕೂಲಿ ಕಾರ್ಮಿಕರು ಪಾಲ್ಗೊಂಡಿದ್ದರು. ಅದರಲ್ಲಿ ಮಹಿಳಾ ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details