ಕರ್ನಾಟಕ

karnataka

ETV Bharat / state

ಪ. ಬಂಗಾಳ ಚುನಾವಣಾ ಉಸ್ತುವಾರಿಯಾಗಿ ನಾರಾಯಣಸಾ ಭಾಂಡಗೆ ನೇಮಕ - bagalakote news

ನಾರಾಯಣಸಾ ಭಾಂಡೆಗೆ ಅವರು ಆರ್​ಎಸ್​ಎಸ್ ಸಂಘಟನೆ ಮೂಲಕ ಬಿಜೆಪಿ ಪಕ್ಷದ ಸಂಘಟನೆ ಮಾಡುತ್ತಾ ಬಂದಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಾದ ಹಿನ್ನೆಲೆ ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಪಕ್ಷಾಂತರ ಆಗದೆ ಬಿಜೆಪಿ ಪಕ್ಷದಲ್ಲಿಯೇ ಇದ್ದು, ಸಂಘಟನೆ ಮಾಡುತ್ತಾ ಬಂದಿದ್ದಾರೆ.

Narayanasa Bhanda appointed in charge of Election in West Bengal
ಉಸ್ತುವಾರಿಯಾಗಿ ನೇಮಕಗೊಂಡ ನಾರಾಯಣಸಾ ಭಾಂಡಗೆ

By

Published : Mar 18, 2021, 4:44 PM IST

ಬಾಗಲಕೋಟೆ: ಬಿಜೆಪಿ ಮುಖಂಡ ಹಾಗೂ ಎಸ್​ಎಸ್​ಕೆ ಸಮಾಜದ ಹಿರಿಯ ನಾರಾಯಣಸಾ ಭಾಂಡಗೆ ಅವರನ್ನು ಬಿಜೆಪಿ ಪಕ್ಷದ ವತಿಯಿಂದ ಪಶ್ಚಿಮ ಬಂಗಾಳದಲ್ಲಿ ನಡೆಯುವ ಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.

ಕೃಷ್ಣಾ ನಗರ ಹಾಗೂ ಬೈರಿಪುರಿ ಮತಕ್ಷೇತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಅವರ ಜೊತೆಗೆ ಬಾಗಲಕೋಟೆ ನಿವಾಸಿ, ವಿಪ ಮಾಜಿ‌ ಸದಸ್ಯ ನಾರಾಯಣಸಾ ಭಾಂಡಗೆ ಬಿರುಸಿನಿಂದ ಪ್ರಚಾರ ನಡೆಸಿದ್ದಾರೆ.

ನಾರಾಯಣಸಾ ಭಾಂಡಗೆ ಅವರು ಆರ್​ಎಸ್​ಎಸ್ ಸಂಘಟನೆ ಮೂಲಕ ಬಿಜೆಪಿ ಸಂಘಟನೆ ಮಾಡುತ್ತಾ ಬಂದಿದ್ದಾರೆ. ನಿಷ್ಠಾವಂತ ಕಾರ್ಯಕರ್ತರಾಗಿದ್ದು, ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಪಕ್ಷಾಂತರ ಆಗದೆ ಬಿಜೆಪಿ ಪಕ್ಷದಲ್ಲಿಯೇ ಇದ್ದು, ಸಂಘಟನೆ ಮಾಡುತ್ತಾ ಬಂದಿದ್ದಾರೆ.

ಈ‌ ಹಿನ್ನೆಲೆಯಲ್ಲಿ ಭಾಂಡೆಗೆ ಅವರಿಗೆ ಪಶ್ಚಿಮ ಬಂಗಾಳ ಚುನಾವಣೆಗಾಗಿ ಸಚಿವ ಅರವಿಂದ ಲಿಂಬಾವಳಿ ಜೊತೆಗೆ ಉಸ್ತುವಾರಿ ಆಗಿ ನೇಮಕ ಮಾಡಲಾಗಿದೆ. ಈಗ ನಾರಾಯಣಸಾ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಪರ ಬಿರುಸಿನ‌ ಪ್ರಚಾರ ಮಾಡುತ್ತಿದ್ದಾರೆ.

ABOUT THE AUTHOR

...view details