ಬಾಗಲಕೋಟೆ: ದಸರಾ ಹಬ್ಬದ ಅಂಗವಾಗಿ ನಗರದ ಎಸ್.ಎಸ್.ಕೆ ಸಮಾಜದ ವತಿಯಿಂದ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿ ನಿತ್ಯ ಅಲಂಕಾರ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
ನಗರದ ಎಂ.ಜಿ.ರಸ್ತೆಯಲ್ಲಿರುವ ಅಂಬಾ ಭವಾನಿ ದೇವಿಯ ದರ್ಶನಕ್ಕೆ ಎಲ್ಲಾ ಜನಾಂಗದವರು ಸಂಜೆ ನಡೆಯುವ ಮಹಾಮಂಗಳಾರತಿ ಪೂಜೆಯಲ್ಲಿ ಪಾಲ್ಗೊಂಡು, ಪ್ರಸಾದ ಸ್ವೀಕರಿಸಿ ಭಕ್ತಿ ಮೆರೆಯುತ್ತಾರೆ. ದೇವಿಗೆ ಒಂದೂ ದಿನ ನಿಂಬೆಹಣ್ಣು, ಮೆಣಸಿನಕಾಯಿ ಸೇರಿದಂತೆ ಇತರ ಹಣ್ಣುಗಳಿಂದ ಅಲಂಕಾರ ಹಾಗೂ ಗಾಜಿನ ಬಳೆ, ಹೊಸ 100 ಹಾಗೂ 200 ರೂ. ನೋಟುಗಳಿಂದ ದೇವಿಗೆ ಅಲಂಕಾರ ಮಾಡಿದ್ದು ಗಮನ ಸೆಳೆಯುತ್ತಿತ್ತು.