ಬಾಗಲಕೋಟೆ:ತನ್ನ ಸಹೋದರಿ ಜೊತೆ ಫೋನ್ನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನೊಬ್ಬನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.
ಸಹೋದರಿ ಜತೆ ಫೋನ್ನಲ್ಲಿ ಮಾತ್ನಾಡಿದ ಯುವಕ.. ಕೋಪೋದ್ರಿಕ್ತ ಅಣ್ಣ ಆತನ ಕೊಲೆ ಮಾಡಿಬಿಟ್ಟ.. - Murder of a young man
ತನ್ನ ಸಹೋದರಿ ಜೊತೆ ಫೋನ್ನಲ್ಲಿ ಮಾತನಾಡಿದ್ದಕ್ಕೆ ಆಕ್ರೋಶಗೊಂಡ ಸಹೋದರನೊಬ್ಬ ತನ್ನ ಸ್ನೇಹಿತನ ಜೊತೆ ಸೇರಿ ಯುವಕನೊಬ್ಬನನ್ನು ಕೋಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಕ್ರಾಸ್ ಬಳಿ ನಡೆದಿದೆ.
ಸುನಗಾ ಗ್ರಾಮದ 22 ವರ್ಷದ ನಬಿಸಾಬ್ ತಹಶೀಲ್ದಾರ ಕೊಲೆಯಾದ ಯುವಕ. ಅದೇ ಗ್ರಾಮದ ವಿಠ್ಠಲ ವಡವಾಣಿ ಹಾಗೂ ಮಂಜುನಾಥ ನರಿ ಕೊಲೆ ಮಾಡಿರುವ ಆರೋಪಿಗಳು. ಕೊಲೆಯಾದ ನಬಿಸಾಬ್, ವಿಠ್ಠಲ ಎಂಬಾತನ ಸಹೋದರಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ನಬಿಸಾಬ್ಗೆ ಎಚ್ಚರಿಕೆ ನೀಡಿದ್ದ ವಿಠ್ಠಲ, ತನ್ನ ಸಹೋದರಿ ಜೊತೆ ಫೋನಿನಲ್ಲಿ ಮಾತನಾಡದಂತೆಯೂ ತಾಕೀತು ಮಾಡಿದ್ದ ಎನ್ನಲಾಗಿದೆ. ಆದರೂ ವಿಠ್ಠಲನ ಸಹೋದರಿ ಜೊತೆ ನಬಿಸಾಬ್ ಫೋನಿನಲ್ಲಿ ಮಾತು ಮುಂದುವರೆಸಿದ್ದ.
ನಿನ್ನೆ ರಾತ್ರಿ ನಬಿಸಾಬ್ನನ್ನ ಸುನಗಾ ಕ್ರಾಸ್ ಬಳಿ ಕರೆದೊಯ್ದು ವಿಠ್ಠಲ ಹಾಗೂ ಮಂಜುನಾಥ ಕೊಲೆ ಮಾಡಿದ್ದಾಗಿ ತಿಳಿದು ಬಂದಿದೆ. ಸುದ್ದಿ ತಿಳಿದ ಬೀಳಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಲೆ ಆರೋಪಿಗಳನ್ನ ಬಂಧಿಸಿದ್ದಾರೆ.