ಕರ್ನಾಟಕ

karnataka

ETV Bharat / state

ಜಾತಿ, ಧರ್ಮ ನೋಡದೆ ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಮಾಡುತ್ತಿದೆ ಮುಸ್ಲಿಂ ಯುವಕರ ತಂಡ

ಬಾಗಲಕೋಟೆ ನಗರದ ಮುಸ್ಲಿಂ ಯುವಕರ ತಂಡವೊಂದು ಕೋವಿಡ್​ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವೀಯ ಕಾರ್ಯ ಮಾಡುತ್ತಿದೆ.​

Funeral of Covid dead bodies
ಮಾನವೀಯ ಕಾರ್ಯ ಮಾಡುತ್ತಿರುವ ಮುಸ್ಲಿಂ ಯುವಕರ ತಂಡ

By

Published : Jun 13, 2021, 7:37 AM IST

ಬಾಗಲಕೋಟೆ:ಕೋವಿಡ್ ಸೋಂಕಿನಿಂದ ಪೋಷಕರು ಮೃತಪಟ್ಟರೆ ಸ್ವಂತ ಮಕ್ಕಳೇ ಹತ್ತಿರ ಬಾರದ ಪ್ರಸಕ್ತ ಸನ್ನಿವೇಶದಲ್ಲಿ ಜಾತಿ, ಧರ್ಮ ನೋಡದೆ ಕೋವಿಡ್​ ಸೋಂಕಿನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರ ಉಚಿತವಾಗಿ ನೆರವೇರಿಸುವ ಮೂಲಕ ನಗರದ ಕಿದ್​ಮತ್ -ಎ-​ ಇನ್ಸಾನ್ ಫೌಂಡೇಶನ್​ ಎಂಬ ಮುಸ್ಲಿಂ ಯುವಕರ ತಂಡ ಮಾನವೀಯ ಕಾರ್ಯ ಮಾಡುತ್ತಿದೆ.

ಜಿಲ್ಲೆಯ ಸರ್ಕಾರಿ ಅಥವಾ ಖಾಸಗಿ ಯಾವುದೇ ಆಸ್ಪತ್ರೆಗಳಲ್ಲಿ ಜನ ಕೋವಿಡ್​ನಿಂದ ಮೃತಪಟ್ಟರೆ ವೈದ್ಯಕೀಯ ಸಿಬ್ಬಂದಿ ಯುವಕರ ತಂಡಕ್ಕೆ ಮಾಹಿತಿ ನೀಡುತ್ತಾರೆ. ಈ ವೇಳೆ ತಮ್ಮದೇ ಆ್ಯಂಬುಲೆನ್ಸ್​ ಮೂಲಕ ಆಗಮಿಸುವ ಸ್ವಯಂ ಸೇವಕರು, ಮೃತದೇಹವನ್ನು ಸಂಬಂಧಪಟ್ಟ ಸ್ಥಳಕ್ಕೆ ತಲುಪಿಸುತ್ತಾರೆ. ಅಷ್ಟೇ ಅಲ್ಲದೆ, ಪಿಪಿಇ ಕಿಟ್ ಧರಿಸಿ, ಆಯಾ ಧರ್ಮದ ಸಂಪ್ರದಾಯದಂತೆ ತಾವೇ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.

ಮಾನವೀಯ ಕಾರ್ಯ ಮಾಡುತ್ತಿರುವ ಮುಸ್ಲಿಂ ಯುವಕರ ತಂಡ

ಮೇಲಿನ ಎಲ್ಲಾ ಕಾರ್ಯಗಳನ್ನು ಯುವಕರ ತಂಡ ಉಚಿತವಾಗಿ ಮಾಡುತ್ತಿದೆ. ಎಲ್ಲಾ ಜಾತಿ, ಧರ್ಮಗಳ ಜನರಿಗೂ ತಮ್ಮ ಸೇವೆಯನ್ನು ಒದಗಿಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಸುಮಾರು 70ಕ್ಕೂ ಅಧಿಕ ಕೋವಿಡ್​ ಸೋಂಕಿತರ ಮೃತದೇಹಗಳನ್ನು ಕಿದ್​ಮತ್ -ಎ-​ ಇನ್ಸಾನ್ ತಂಡ ಅಂತ್ಯ ಸಂಸ್ಕಾರ ನಡೆಸಿದೆ. ಕೇವಲ ಅಂತ್ಯ ಸಂಸ್ಕಾರ ಮಾತ್ರವಲ್ಲದೆ, ಕಷ್ಟದಲ್ಲಿರುವ ಜನರಿಗೆ ಊಟ, ವಸತಿ ಕಲ್ಪಿಸಿಕೊಡುವ ಕಾರ್ಯವನ್ನೂ ಈ ಯುವಕರು ಮಾಡುತ್ತಿದ್ದಾರೆ. ಜಾತಿ ಭೇದ ನೋಡದೆ ಸಮಾಜಸೇವೆ ಮಾಡಿದರೆ ದೇವರು ಶಾಂತಿ, ನೆಮ್ಮದಿ ನೀಡುತ್ತಾನೆ ಎನ್ನುವುದು ತಂಡದ ಸದಸ್ಯ ಗಫಾರ್ ಕೊರ್ತಿಯವರ ಮಾತಾಗಿದೆ.

ಓದಿ : ನಾಯಿಗಳ ದಾಳಿಗೆ ತುತ್ತಾಗುತ್ತಿದ್ದ ಜಿಂಕೆ ರಕ್ಷಿಸಿದ ಗ್ರಾಮಸ್ಥರು

ABOUT THE AUTHOR

...view details