ಬಾಗಲಕೋಟೆ : ಎಂಎಸ್‍ಪಿಟಿಸಿ ಸಂಸ್ಥೆ ವತಿಯಿಂದ ಜಿಲ್ಲೆಯ ದೇವದಾಸಿ ಮಹಿಳೆಯರಿಗೆ ಗೋಧಿ, ತೊಗರಿ ಬೇಳೆ, ಹುರಳಿ ಕಾಳು, ಸಕ್ಕರೆ, ಕಡಲೆ ಬೇಳೆ ಸೇರಿದಂತೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಕಾರ್ಯಕ್ಕೆ ಜಿ.ಪಂ ಸಿಇಒ ಗಂಗೂಬಾಯಿ ಮಾನಕರ ಚಾಲನೆ ನೀಡಿದರು.
ದೇವದಾಸಿ ಮಹಿಳೆಯರ ನೆರವಿಗೆ ಬಂದ ಎಂಎಸ್‍ಪಿಟಿಸಿ - latest bagalkote news
ಬಾಗಲಕೋಟೆ ಜಿಲ್ಲೆಯ ಎಂಎಸ್‍ಪಿಟಿಸಿ ವತಿಯಿಂದ ದೇವದಾಸಿ ಮಹಿಳೆಯರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು. ಜೊತೆಗೆ ಕೊರೊನಾ ಹೋರಾಟಕ್ಕೆ 1.16 ಲಕ್ಷ ಹಣ ನೀಡಿದ್ದಾರೆ.
ದೇವದಾಸಿ ಮಹಿಳೆಯರ ನೆರವಿಗೆ ಬಂದ ಎಂಎಸ್‍ಪಿಟಿಸಿ
ಜಿಲ್ಲಾಡಳಿತ ಭವನದ ಮುಖ್ಯ ದ್ವಾರದಲ್ಲಿ ಸಾಂಕೇತಿಕವಾಗಿ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ರೆಡ್ಡಿ, ಜಿಲ್ಲೆಯ ಎಲ್ಲಾ ಎಂಎಸ್‍ಪಿಟಿಸಿ ಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಎಂಎಸ್‍ಪಿಟಿಸಿ ಯಿಂದ 1.16 ಲಕ್ಷ ನೆರವು
ಜಿಲ್ಲೆಯಲ್ಲಿರುವ ಒಟ್ಟು 5 ಎಂಎಸ್ಪಿಟಿಸಿಗಳ ವತಿಯಿಂದ ಕೊವಿಡ್-19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 1.16 ಲಕ್ಷ ರೂ.ಗಳ ಚೆಕ್‍ನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರಿಗೆ ಹಸ್ತಾಂತರಿಸಿದರು.