ಕರ್ನಾಟಕ

karnataka

ETV Bharat / state

ತನ್ನ ಮೂವರು ಮಕ್ಕಳಿಗೆ ವಿಷ ಕೊಟ್ಟು ತಾನೂ ಕುಡಿದ ತಾಯಿ: ಮಕ್ಕಳು ಸಾವು!

ಇಂದು ಬೆಳ್ಳಿಗೆ 6-30ರ ಸುಮಾರಿಗೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದ ಭಾಗ್ಯಶ್ರೀ 10 ಗಂಟೆಯಾದರೂ ಮನೆಗೆ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯೆ ತೀವ್ರ ಅಸ್ವಸ್ಥಳಾಗಿ ಭಾಗ್ಯಶ್ರೀ ಬಳಲುತ್ತಿದ್ದರೆ, ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು.

ಮಕ್ಕಳಿಗೆ ವಿಷ
ಮಕ್ಕಳಿಗೆ ವಿಷ

By

Published : Jul 4, 2020, 7:35 PM IST

Updated : Jul 4, 2020, 8:02 PM IST

ಬಾಗಲಕೋಟೆ: ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಮುಂದಾಗಿದ್ದು, ಸದ್ಯ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ನಡೆದಿದೆ. ಮೂವರೂ ಮಕ್ಕಳು ಸಾವನ್ನಪ್ಪಿದ್ದಾರೆ.

ಭಾಗ್ಯಶ್ರೀ ಚಿಕ್ಕಯ್ಯ ಮಠದ (32) ಮಕ್ಕಳಿಗೆ ವಿಷ ಕೊಟ್ಟು ತಾನೂ ಕುಡಿದ ತಾಯಿ. ಈಕೆ ಕಳೆದ ಎರಡು ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡು ಖಿನ್ನತೆಗೆ ಒಳಗಾಗಿದ್ದಳು. ಹಾಗಾಗಿ ತಾನು ವಿಷ ಕುಡಿದು ಮಕ್ಕಳಾದ ಶಿವಾನಿ (12), ಶಿವಶಂಕರ(10) ಹಾಗೂ ಶಿವಶ್ರೀ(9)ಗೆ ಕುಡಿಯುವ ನೀರಿನಲ್ಲಿ ವಿಷ ಹಾಕಿ ಕುಡಿಸಿದ್ದಾಳೆ. ಮೂವರೂ ಮಕ್ಕಳು ಮೃತಪಟ್ಟಿದ್ದು, ತಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಮಕ್ಕಳಿಗೆ ವಿಷ ಕೊಟ್ಟು ತಾನೂ ಕುಡಿದ ತಾಯಿ

ಇಂದು ಬೆಳಗ್ಗೆ 6-30ರ ಸುಮಾರಿಗೆ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿದ್ದ ಭಾಗ್ಯಶ್ರೀ 10 ಗಂಟೆಯಾದರೂ ಮನೆಗೆ ವಾಪಸ್ ಬಾರದ ಕಾರಣ ಮನೆಯವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ದೇವಸ್ಥಾನಕ್ಕೆ ತೆರಳುವ ಮಾರ್ಗ ಮಧ್ಯೆ ತೀವ್ರ ಅಸ್ವಸ್ಥಳಾಗಿ ಭಾಗ್ಯಶ್ರೀ ಬಳಲುತ್ತಿದ್ದರೆ, ಮೂವರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದರು.

ಮನೆಯಿಂದ ಬರುವಾಗ ಕುಡಿಯುವ ನೀರಿನಲ್ಲಿ ಉಣ್ಣೆಗೆ ಸಿಂಪಡಿಸುವ ಔಷಧಿ ಮಿಶ್ರಗೊಳಿಸಿ ಮಕ್ಕಳಿಗೆ ನೀಡಿ, ತಾನೂ ಸಹ ಕುಡಿದಿರುವುದು ತಿಳಿದು ಬಂದಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 4, 2020, 8:02 PM IST

ABOUT THE AUTHOR

...view details