ಬಾಗಲಕೋಟೆ: ಬನಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದರಿಂದ ಪ್ರಾಥಮಿಕ ಶಾಲೆಯನ್ನು ಇಲ್ಲಿಂದ ಸ್ಥಳಾಂತರ ಮಾಡಲಾಗಿತ್ತು. ಆದರೆ, ಇದೇ ಕೊಠಡಿಗಳಲ್ಲಿ ಬಿಎ ವಿದ್ಯಾರ್ಥಿಗಳಿಗೆ ಇದೀಗ ಪಾಠ ಮುಂದುವರೆಸಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ಭಯದ ನೆರಳಲ್ಲಿ ಪಾಠ ಕೇಳುವಂತಾಗಿದೆ.
ಕಟ್ಟಡ ಮುಂಭಾಗ ಸಂಪೂರ್ಣ ಬೀಳುವ ಹಂತಕ್ಕೆ ಬಂದಿದೆ. ಆದರೂ ಕೊಠಡಿಗಳನ್ನು ಸ್ವಲ್ಪ ದುರಸ್ತಿಗೊಳಿಸಿ ಮತ್ತೆ ಇಲ್ಲಿಯೇ ಪಾಠ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಬಿಸಿ ಊಟ ತಯಾರಿಸಲು ಬಳಸಲಾಗುತ್ತಿದೆ. ಇದೂ ಸಹ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಕಟ್ಟಡ ಯಾವಾಗಲಾದರೂ ಬೀಳುವ ಸಾಧ್ಯತೆ ಇದೆ. ಈ ಬಗ್ಗೆ ಎಲ್ಲರಿಗೂ ಎಲ್ಲವೂ ಗೊತ್ತಿದೆ. ಆದರೂ ಬೇರೆ ವ್ಯವಸ್ಥೆ ಇಲ್ಲದ್ದರಿಂದ 250 ಕ್ಕೂ ಅಧಿಕ ವಿದ್ಯಾರ್ಥಿಗಳು ಭಯದ ನೆರಳಲ್ಲಿಯೇ ಪಾಠ ಕೇಳುವಂತಾಗಿದೆ ಎನ್ನುತ್ತಿದ್ದಾರೆ ಇಲ್ಲಿನ ವಿದ್ಯಾರ್ಥಿಗಳು.