ಕರ್ನಾಟಕ

karnataka

ETV Bharat / state

ಏಪ್ರಿಲ್ 18ಕ್ಕೆ ಬಾಗಲಕೋಟೆಗೆ ಮೋದಿ ಆಗಮನ: ಸಜ್ಜಾಗುತ್ತಿದೆ ಬೃಹತ್ ವೇದಿಕೆ - Bagalkote

ಬಾಗಲಕೋಟೆ ನಗರಕ್ಕೆ ಏಪ್ರಿಲ್ 18 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆ ಸುಮಾರು 16 ಏಕರೆ ಇರುವ ಜಮೀನಿನಲ್ಲಿ ಬೃಹತ್​ ವೇದಿಕೆ ಸಿದ್ದವಾಗುತ್ತಿದೆ.

ಸ್ವಚ್ಚತಾ ಕಾರ್ಯಕ್ರಮಕ್ಕೆ ಶಾಸಕ ವೀರಣ್ಣ ಚರಂತಿಮಠ ಚಾಲನೆ

By

Published : Apr 11, 2019, 8:45 AM IST

ಬಾಗಲಕೋಟೆ: ಏಪ್ರಿಲ್ 18 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಗಲಕೋಟೆ ನಗರಕ್ಕೆ ಆಗಮಿಸಲಿದ್ದಾರೆ. ಈ ಹಿನ್ನಲೆ ನಗರದ ರೋಟರಿ ವೃತ್ತದ ಬಳಿಯಿರುವ ಬೃಹತ್ ಸ್ಥಳದಲ್ಲಿ ಸ್ವಚ್ಚತಾ ಕಾರ್ಯಕ್ರಮಕ್ಕೆ ಶಾಸಕ ವೀರಣ್ಣ ಚರಂತಿಮಠ ಚಾಲನೆ ನೀಡಿದರು.

ಸ್ವಚ್ಚತಾ ಕಾರ್ಯಕ್ರಮಕ್ಕೆ ಶಾಸಕ ವೀರಣ್ಣ ಚರಂತಿಮಠ ಚಾಲನೆ

ಸುಮಾರು 16 ಏಕರೆ ಇರುವ ಬಸಪ್ಪ ದೊಡ್ಡಮನಿ ಇವರ ಜಮೀನಿನಲ್ಲಿ ಮೋದಿ ಆಗಮನಕ್ಕೆ ಬೃಹತ್ ವೇದಿಕೆ ಸಜ್ಜಾಗಲಿದೆ. ವಿಜಯಪುರ-ಬಾಗಲಕೋಟೆ ಲೋಕಸಭಾ ಕ್ಷೇತ್ರದ ಪ್ರಚಾರದ ಅಂಗವಾಗಿ ಆಗಮಿಸುತ್ತಿರುವ ಹಿನ್ನಲೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಸೇರುವ ನೀರಿಕ್ಷೆಯಿದೆ. ಮೂರು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆ.ಎಸ್ ಈಶ್ವರಪ್ಪ ಸೇರಿದಂತೆ ಇತರ ಮುಖಂಡರು ಭಾಗವಹಿಸಲಿದ್ದಾರೆ. ಎಪ್ರಿಲ್ 18 ರಂದು ಮಧ್ಯಾಹ 2 ಗಂಟೆಗೆ ಆಗಮಿಸಲಿರುವ ಪ್ರಧಾನಿ ಮಂತ್ರಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಿ, ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶಾಸಕ ವೀರಣ್ಣ ಚರಂತಿಮಠ ತಿಳಿಸಿದರು.

For All Latest Updates

TAGGED:

Bagalkote

ABOUT THE AUTHOR

...view details