ಕರ್ನಾಟಕ

karnataka

ETV Bharat / state

ವಿದ್ಯುತ್ ಚಿತಾಗಾರ ಕಾಮಗಾರಿ ವೀಕ್ಷಿಸಿದ ಶಾಸಕ ಚರಂತಿಮಠ - ವಿದ್ಯುತ್ ಚಿತಾಗಾರ ಕಾಮಗಾರಿ

ಸುಮಾರು‌ 4 ಕೋ.ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತಾಗಾರದ ಕಾಮಗಾರಿಯನ್ನು ಶಾಸಕ ವೀರಣ್ಣ ಚರಂತಿಮಠ ವೀಕ್ಷಣೆ ಮಾಡಿದರು.

Charantimath
ಶಾಸಕ ಚರಂತಿಮಠ

By

Published : Aug 30, 2020, 5:23 PM IST

ಬಾಗಲಕೋಟೆ: ನವನಗರದ ಹಿಂದೂ ರುದ್ರಭೂಮಿ ಬಳಿ ವಿದ್ಯುತ್ ಚಿತಾಗಾರದ ಕಾಮಗಾರಿಯನ್ನು ಶಾಸಕ ವೀರಣ್ಣ ಚರಂತಿಮಠ ವೀಕ್ಷಣೆ ಮಾಡಿದರು.

ಸುಮಾರು‌ 4 ಕೋ.ರೂ ವೆಚ್ಚದಲ್ಲಿ ನಿರ್ಮಾಣ ಆಗುವ ಈ ಚಿತಾಗಾರಕ್ಕೆ ಒಳಚರಂಡಿ, ನೀರಿನ ಟ್ಯಾಂಕ್, ಪಾದಚಾರಿ ರಸ್ತೆ ಸೇರಿದಂತೆ, ಇತರ ಸೌಲಭ್ಯ ಹೊಂದಿರುವ ಚಿತಾಗಾರ ಕೆಲಸವನ್ನು ವರ್ಷದೊಳಗೆ ಮುಕ್ತಾಯಗೊಳಿಸುವಂತೆ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿದೆ.

ಈ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಶಾಸಕರು ಗುಣಮಟ್ಟದ ಕಾಮಗಾರಿ ಆಗಬೇಕು ಎಂದು ಸೂಚನೆ ನೀಡಿದರು.

ABOUT THE AUTHOR

...view details