ಕರ್ನಾಟಕ

karnataka

ETV Bharat / state

ನಿಷೇಧಾಜ್ಞೆ ಉಲ್ಲಂಘಿಸಿ ನೀರಿಗಾಗಿ ಶಾಸಕ ಪ್ರತಿಭಟನೆ

ಜಿಲ್ಲೆಯ ಕೃಷ್ಣಾ ನದಿಯಲ್ಲಿ ನೀರು ಕಡಿಮೆಯಾಗಿ, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಶಾಸಕ ಆನಂದ ನ್ಯಾಮಗೌಡ ನಿಷೇಧಾಜ್ಞೆ ಜಾರಿ ನಡುವೆ ಹಿಪ್ಪರಗಿ ಜಲಾಶಯ ಬಳಿ ಇರುವ ಅಭಿಯಂತರ ಕಚೇರಿ ಎದುರು ಸರ್ಕಾರದ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.

protest
ಪ್ರತಿಭಟನೆ

By

Published : Apr 10, 2020, 7:14 PM IST

ಬಾಗಲಕೋಟೆ :ರಬಕವಿ - ಬನಹಟ್ಟಿ ತಾಲೂಕಿನಲ್ಲಿ ಇರುವ ಹಿಪ್ಪರಗಿ ಅಣೆಕಟ್ಟೆಯಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ ಮಾಡಿಲ್ಲ ಎಂದು ನಿಷೇಧಾಜ್ಞೆ ಜಾರಿಯ ನಡುವೆಯೂ ಶಾಸಕ ಆನಂದ ನ್ಯಾಮಗೌಡ ನೀರು ಬಿಡುವಂತೆ ಆಗ್ರಹಿಸಿ ಹಿಪ್ಪರಗಿ ಜಲಾಶಯ ಬಳಿ ಇರುವ ಅಭಿಯಂತರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ

ಹಿಪ್ಪರಗಿ ಬ್ಯಾರೇಜ್ ನಿಂದ ಸರ್ಕಾರದ ಆದೇಶದಂತೆ, ಚಿಕ್ಕಪಡಸಲಗಿ ಬ್ಯಾರೇಜ್ ಶ್ರಮಬಿಂದು ಸಾಗರಕ್ಕೆ ಇವತ್ತು ಸರ್ಕಾರ ನೀರು ಹರಿಸಬೇಕಾಗಿತ್ತು. ಆದರೆ, ರೈತ ವಿರೋಧಿ ಈಗಿನ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೇ ಬೆಳಗಾವಿ ಸಹಾಯಕ ಆಯುಕ್ತರ ಆದೇಶ ಇದ್ದರೂ ನೀರು ಬಿಡದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಮೊದಲೇ ಕೋವಿಡ್​-19 ರೋಗದ ಭಯದಿಂದ ಜನತೆ ಆತಂಕಗೊಂಡಿದ್ದಾರೆ. ಈಗ ನೀರು ಬಿಡುಗಡೆ ಮಾಡದೇ ಇದ್ದಲ್ಲಿ ರೋಗಕ್ಕಿಂತ ಹೆಚ್ಚು ನೀರು ಇಲ್ಲದೇ ಸಾಯಬೇಕಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಶಾಸಕರನ್ನು ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಂಡರೂ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದು ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ತಿಳಿಸಿದರು.

ನಂತರ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದುಕೊಂಡರು. ಈ ಸಂದರ್ಭದಲ್ಲಿ ಜಮಖಂಡಿ ಹಾಗೂ ಅಥಣಿ ತಾಲೂಕಿನ ರೈತರಿಗೂ 32 ಗ್ರಾಮಗಳಿಗೂ ಕುಡಿಯುವ ನೀರಿಗೆ ಅನುಕೂಲವಾಗಲಿದ್ದು, ಶೀಘ್ರವಾಗಿ ನೀರು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ABOUT THE AUTHOR

...view details