ಬಾಗಲಕೋಟೆ: ವಿಧಾನಸಭೆ ಚುನಾವಣೆಯಲ್ಲಿ ಸಚಿವರ ಸಿಡಿ ಹೊರ ಬರುತ್ತದೆ ಎಂದು ಸಿ.ಎಂ.ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮಾದರಿಯಲ್ಲೇ ಇದೀಗ ಮಹಾರಾಷ್ಟ್ರದ ಶಿವಸೇನೆ ಶಾಸಕರನ್ನು ಸೆಳೆದಿದ್ದಾರೆ. ಹಿಂದೆ ನಮ್ಮ ರಾಜ್ಯದ ಶಾಸಕರಿಗೆ 30 ಕೋಟಿ ರೂ ಮತ್ತು ಒಂದು ಮಂಚ ಕೊಟ್ಟಿದ್ದರು ಎಂದರು.
ಸಿಡಿ ವಿಚಾರದ 12 ಮಂತ್ರಿಗಳು ವಿಧಾನಸೌಧದಲ್ಲಿ ತುಂಬಾ ಗೌರವಾನ್ವಿತರಂತೆ ಮಾತನಾಡುತ್ತಾರೆ. ವಿಧಾನಸಭೆಯ ಚುನಾವಣೆಯಲ್ಲಿ ಇವರ ಸಿಡಿ ಹೊರಬರುತ್ತದೆ. ಒಟ್ಟು 17-18 ಸಿಡಿಗಳಿವೆ. ಅವರೆಲ್ಲ ತಡೆಯಾಜ್ಞೆ ತೆಗೆದುಕೊಂಡಿದ್ದಾರೆ ಎಂದು ಹೇಳಿದರು.
ಜುಲೈ 30ರೊಳಗೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಮುಕ್ತಾಯ ಮಾಡುತ್ತವೆ. ಪಕ್ಷಕ್ಕೆ ಸೇರ್ಪಡೆಗೊಳ್ಳುವವರ ಹೆಸರನ್ನು ಈಗಾಗಲೇ ಹೇಳೋಕಾಗೋದಿಲ್ಲ. ಪ್ರಮುಖರು ಜೆಡಿಎಸ್ ಸೇರಲಿದ್ದಾರೆ ಎಂದರು.
'ಬೀದಿಯಲ್ಲಿ ಬಿದ್ದಿದ್ದ ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಬಂದವ ನಾನು':ಎಚ್ಡಿಕೆ ಮತ್ತೆ ಸಿಎಂ ಆಗಲು, ಜೆಡಿಎಸ್ ರಾಷ್ಟ್ರೀಯ ಪಕ್ಷವಾ? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಾದಾಮಿಯಿಂದ ಸಿದ್ದರಾಮಯ್ಯ ಹೇಗೆ ಎಂಎಲ್‌ಎ ಆದ್ರು. ಬೀದಿಯಲ್ಲಿ ಬಿದ್ದಿದ್ದ ಸಿದ್ದರಾಮಯ್ಯರನ್ನು ಬಾದಾಮಿಗೆ ಕರೆದುಕೊಂಡು ಬಂದವ ನಾನು. ಬಳಿಕ ನನ್ನ ಜೊತೆ ಮಂತ್ರಿಯಾಗಿದ್ದ ಬಿಬಿ ಚಿಮ್ಮನಕಟ್ಟಿ ಅವರನ್ನು ಒಪ್ಪಿಸಿ ಸಿದ್ದರಾಮಯ್ಯನವರನ್ನು ಬಾದಾಮಿಯಲ್ಲಿ ನಿಲ್ಲಿಸಿದೆವು. ವೈಎಸ್‌ಆರ್, ಜಗನ್, ಸ್ಟಾಲಿನ್ ರದ್ದು ರಾಷ್ಟ್ರೀಯ ಪಕ್ಷವಲ್ಲ. ಅವರು ಸಿಎಂ ಆಗಿಲ್ವ?, ಹಾಗೆಯೇ ನಾವು ಮುಂದಿನ ದಿನದಲ್ಲಿ ಆಡಳಿತಕ್ಕೆ ಬರುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:ಮುದ್ದೇಬಿಹಾಳ : ಅಬಕಾರಿ ಅಧಿಕಾರಿಯೊಂದಿಗೆ ಶಾಸಕ ನಡಹಳ್ಳಿ ಸಹೋದರನ ಜಟಾಪಟಿ