ಬಾಗಲಕೋಟೆ :ಸಿದ್ದರಾಮಯ್ಯ ಯಾರು, ಅವನಿಗೆ ಬಿಜೆಪಿ ಪಕ್ಷಕ್ಕೆ ಏನು ಸಂಬಂಧ. ಅವರು ವಿರೋಧ ಪಕ್ಷದವರು ವಿರೋಧ ಮಾಡುತ್ತಾ ಇರಲಿ, ನಾವು ಕೆಲಸ ಮಾಡುತ್ತಾ ಇರುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ್ ಕತ್ತಿ ಏಕ ವಚನದಲ್ಲಿ ವ್ಯಂಗ್ಯ ಮಾಡಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಏಕ ವಚನದಲ್ಲಿ ಮಾತನಾಡಿದ ಸಚಿವ ಉಮೇಶ್ ಕತ್ತಿ.. ಓದಿ: ಕೊರೊನಾ ಗೆದ್ದ 35 ದಿನಗಳ ಮುದ್ದು ಕಂದ
ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ವಿರುದ್ದ ಹರಿಹಾಯ್ದರು. ವಿರೋಧ ಪಕ್ಷದ ನಾಯಕನಿಗೆ ಮಾಡೋಕೆ ಕೆಲಸ ಇಲ್ಲ.
ರಾಜ್ಯದ ಜನತೆ ವಿರೋಧ ಪಕ್ಷದ ಸ್ಥಾನಕ್ಕೆ ಕೂರಿಸಿದ್ದು, ಅವರು ಅದೇ ಕೆಲಸ ಮಾಡುತ್ತಾರೆ. ನಮ್ಮ ಸಿಎಂ, ಮಂತ್ರಿಗಳು ನಾವೆಲ್ಲ ಸೇರಿ ಕೆಲಸ ಮಾಡುತ್ತೇವೆ. ಇನ್ನು, ಎರಡು ವರ್ಷ ಮಾಡುತ್ತೇವೆ, ಮುಂದೆ ಐದು ವರ್ಷ ನಾವೇ ಆಡಳಿತ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರಿಗಳು ನನ್ನನ್ನು ಮಿಸ್ ಯೂಸ್ ಮಾಡೋಕಾಗಲ್ಲ, ಮಾಡಿದ್ರೆ ಕ್ರಮ :ಜಿಲ್ಲೆಯಲ್ಲಿ ಸಾವಿನ ಲೆಕ್ಕದ ವಿಚಾರವಾಗಿ ಮಾತನಾಡಿ, ಸಿಟಿ ಸ್ಕ್ಯಾನ್‌ನಲ್ಲಿ ಸತ್ತರೆ, ಮನೆಯಲ್ಲಿ ಸತ್ತರೆ ಲೆಕ್ಕ ಇಲ್ಲ. ನಮ್ಮಲ್ಲಿ ಆರ್ಟಿಪಿಸಿಆರ್ ಆಗಿದ್ದು, 145 ಜನ ಸತ್ತದ್ದು ಮಾಹಿತಿ ಇದೆ. ಇದನ್ನು ಬಿಟ್ಟು ಮನ್ಯಾಗ್ ಸತ್ತ, ತೋಟದಾಗ್ ಸತ್ತ ಅನ್ನೋದು ಲೆಕ್ಕಕ್ಕೆ ಬರೋದಿಲ್ಲ. ಎದೆಗೆ ಕಫ ಬಂದು ಸತ್ತ ಅಂದರೆ ಲೆಕ್ಕಕ್ಕೆ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯಲ್ಲಿ ಸಿಎಂ ಅಹ೯ತೆ ವ್ಯಕ್ತಿಗಳೇ ಇಲ್ಲ ಎಂದು ಸಿದ್ದರಾಮಯ್ಯನವರ ಹೇಳಿಕೆಗೆ ಏಕವಚನದಲ್ಲಿ ಸಚಿವ ಕತ್ತಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಯಾರ್ರಿ..? ಬಿಜೆಪಿ ಬಗ್ಗೆ ಮಾತನಾಡಲು ಯಾರು ಅವಾ ಎಂದರು. ಮುಖ್ಯಮಂತ್ರಿ ಆಗೋ ಯೋಗ್ಯತೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೂ ಇಲ್ಲ, ಡಿಕೆಶಿಗೂ ಇಲ್ಲ ಎಂದು ವಾಗ್ದಾಳಿ ಮಾಡಿದರು.
ವೈದ್ಯರ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಚಾಲನೆ :ಗ್ರಾಮದ ಪ್ರವಾಸಿ ಮಂದಿರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಉಭಯ ಸಚಿವರು, ರೈತರಿಗೆ ಬೀಜ ವಿತರಣೆ ಸಹ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ಗ್ರಾಮದ ಮುಳಗಡೆ ಸಮಸ್ಯೆ ಬಗೆಹರಿಸುವ ಕ್ರಮವನ್ನು ಸಹ ತೆಗೆದುಕೊಳ್ಳಲಾಗುತ್ತದೆ.
ಈಗ ಕೋವಿಡ್ ಇರುವ ಹಿನ್ನೆಲೆ ಮೊದಲು ಕೊರೊನಾ ರೋಗ ತಡೆಗಟ್ಟಲು ಎಲ್ಲರೂ ಶ್ರಮಿಸಬೇಕಾಗಿದೆ. ಕೊರೊನಾ ರೋಗ ತಡೆಗಟ್ಟಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಗ್ರಾಮದಲ್ಲಿ ಹರಡುತ್ತಿರುವ ಕೊರೊನಾ ತಡೆಗಟ್ಟಲು ಗ್ರಾಮಸ್ಥರ ಸಹಕಾರ ಅಗತ್ಯವಿದ್ದು, ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿಕೊಂಡರು.