ಕರ್ನಾಟಕ

karnataka

ETV Bharat / state

ಪ್ರವಾಹಪೀಡಿತ ಒಂಟಗೋಡಿ ಶಾಲೆಗೆ ಸಚಿವ ಸುರೇಶ್​ ಕುಮಾರ್ ಭೇಟಿ, ಪರಿಶೀಲನೆ - ಬಾಗಲಕೋಟೆ ಸುದ್ದಿ

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಅವರು, ಜಿಲ್ಲೆಯ ಮುಧೋಳ ತಾಲೂಕಿನ ಪ್ರವಾಹ ಪೀಡಿತ ಒಂಟಗೋಡಿ ಗ್ರಾಮದ ಶಾಲೆಗೆ ನೀಡಿ, ಪರಿಶೀಲಿಸಿದರು.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​

By

Published : Oct 24, 2019, 3:07 PM IST

ಬಾಗಲಕೋಟೆ:ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಜಿಲ್ಲೆಯ ಮುಧೋಳ ತಾಲೂಕಿನ ಪ್ರವಾಹ ಪೀಡಿತ ಒಂಟಗೋಡಿ ಗ್ರಾಮದ ಶಾಲೆಗೆ ನೀಡಿ, ಪರಿಶೀಲನೆ ನಡೆಸಿದ್ರು.

ಪ್ರವಾಹ ಪೀಡಿತ ಒಂಟಗೋಡಿ ಶಾಲೆಗೆ ಸಚಿವ ಸುರೇಶ್​ ಕುಮಾರ್ ಭೇಟಿ, ಪರಿಶೀಲನೆ

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಹದಿಂದ ಒಟ್ಟು 534 ಶಾಲೆಗಳು ಹಾನಿಯಾಗಿದೆ. 37 ಕೋಟಿ ಪರಿಹಾರ ಧನ ನೀಡಬೇಕಾಗಿದ್ದು, ಈ ಕೂಡಲೇ 2 ಕೋಟಿ 69 ಲಕ್ಷ ರೂಪಾಯಿಯನ್ನು ಜಿಲ್ಲಾಡಳಿತ ವತಿಯಿಂದ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.

ರಾಜ್ಯಾದ್ಯಂತ ಪ್ರವಾಹ ಉಂಟಾಗಿರುವ ಪ್ರದೇಶಗಳಲ್ಲಿ ದುರಸ್ತಿಗಾಗಿ 534 ಕೋಟಿ ಬೇಕಾಗಿತ್ತು. ಆದರೆ ರಾಜ್ಯ ಸರ್ಕಾರ, 500 ಕೋಟಿ ಹಣ ಬಿಡುಗಡೆ ಮಾಡಿದ್ದು, ಶಾಲೆ, ಅಂಗನವಾಡಿ ಹಾಗೂ ಆಸ್ಪತ್ರೆಗಳ ಪುನರ್ವಸತಿಗಾಗಿ ಹಣ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ ಸಚಿವರು ಮಾಹಿತಿ ನೀಡಿದರು.

ABOUT THE AUTHOR

...view details