ಕರ್ನಾಟಕ

karnataka

ETV Bharat / state

ಕಾಂಗ್ರೆಸ್‌ನವರದ್ದು ಸಾವಿನಲ್ಲೂ​ ರಾಜಕೀಯ: ಶಿಕ್ಷಣ ಸಚಿವ ನಾಗೇಶ - ಶಿಕ್ಷಣ ಸಚಿವ ನಾಗೇಶ

ಕಾಂಗ್ರೆಸ್​ನವರಿಗೆ ಯಾವ ವಿಷಯವೂ ಸಿಕ್ಕಿಲ್ಲ. ಹಿಜಾಬ್​, ನೈತಿಕ ಶಿಕ್ಷಣ, ಹಲಾಲ್​ ಹೀಗೆ ಇವನ್ನೆಲ್ಲಾ ಬಳಸಿ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಪಟ್ಟರೂ ವಿಫಲವಾಯಿತು. ಈಗ ಸಾವಿನಲ್ಲೂ ರಾಜಕೀಯ ಹುಡುಕುತ್ತಾರೆ ಎಂದು ಸಚಿವ ನಾಗೇಶ್‌ ಟೀಕಿಸಿದರು.

Contractor Santosh Patil
ಶಿಕ್ಷಣ ಸಚಿವ ಬಿ.ಸಿ. ನಾಗೇಶ

By

Published : Apr 12, 2022, 9:50 PM IST

ಬಾಗಲಕೋಟೆ:ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಕ್ಷ ಒತ್ತಾಯಿಸಿರುವ ಬಗ್ಗೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್​ ನುಣುಚಿಕೊಳ್ಳುವ ಪ್ರಯತ್ನ ಮಾಡಿದರು. ಬಾಗಲಕೋಟೆ ನಗರದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದ ಸಮಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ನನಗೆ ಇಂದು ನಿರಂತರ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ಟಿವಿ ನೋಡೋಕಾಗಿಲ್ಲ. ಈ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.


ಕಾಂಗ್ರೆಸ್​ನವರಿಗೆ ಯಾವ ವಿಷಯವೂ ಸಿಕ್ಕಿಲ್ಲ. ಹಿಜಾಬ್​, ನೈತಿಕ ಶಿಕ್ಷಣ, ಹಲಾಲ್​ ಹೀಗೆ ಇವನ್ನೆಲ್ಲಾ ಬಳಸಿ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳುವ ಪ್ರಯತ್ನ ಪಟ್ಟರೂ ವಿಫಲವಾಯಿತು. ಈಗ ಸಾವಿನಲ್ಲಿ ರಾಜಕೀಯ ಹುಡುಕುತ್ತಾರೆ. 40 ಪರ್ಸೆಂಟೇಜ್​ ವಿಚಾರ ಹಳೇದು, ಅದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಎಂದರು.

ಇದನ್ನೂ ಓದಿ:ಬಿಎಸ್​ವೈ ಭೇಟಿ ಮಾಡಿ ಚರ್ಚಿಸಿದ ಸಿಎಂ : ಇಂದೇ ರಾಜೀನಾಮೆ ನೀಡ್ತಾರಾ ಈಶ್ವರಪ್ಪ?

ABOUT THE AUTHOR

...view details