ಬಾಗಲಕೋಟೆ: ಈಗ ಮುಖ್ಯಮಂತ್ರಿ ಯಡಿಯೂರಪ್ಪ ಆಪರೇಷನ್ ಕಮಲ ಮುಂದುವರಿಸಬೇಕು ಎಂಬುವ ಸ್ಥಿತಿಯಲ್ಲಿ ಇಲ್ಲ. ಅಕಸ್ಮಾತ್ ಕಾಂಗ್ರೆಸ್ ಪಕ್ಷದವರೇ ಬಿಟ್ಟು ಬರುತ್ತೇನಿ ಅಂದರೆ ಏನು ಮಾಡೋಕೆ ಆಗುತ್ತೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.
ತೋಟಗಾರಿಕೆ ವಿಶ್ವವಿದ್ಯಾಲಯ ಕಾರ್ಯಕ್ರಮಕ್ಕೆ ಮಾಧುಸ್ವಾಮಿ ಆಗಮಿಸಿದ್ದರು. ಈ ವೇಳೆ ಮಾತನಾಡಿದ ಅವರು, ಆಪರೇಷನ್ ಕಮಲಕ್ಕೆ ಸಂಬಂಧಿಸಿದ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.
ಸರ್ಕಾರ ಉಳಿಸಿಕೊಳ್ಳಲೇಬೇಕು ಎಂದಾಗ ಆ ಪ್ರಶ್ನೆ ಬರುತ್ತೆ. ಸದ್ಯಕ್ಕೆ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ. ಅವರಿಗೆ ಪಕ್ಷ ಬೇಸರವಾಗಿ ಬರುವುದಾದರೆ ಬರಬಹುದು. ಅಂತಹವರು ರಮೇಶ ಜಾರಕಿಹೊಳಿ ಅವರಿಗೆ ನಿಕಟರಾಗಿರಬಹುದು ಎಂದು ತಿಳಿಸಿದರು.