ಕರ್ನಾಟಕ

karnataka

ETV Bharat / state

ಹಾಲು ಕುಡಿದು ಸಾಯುವವರಿಗೆ ಯಾರಾದರೂ ವಿಷ ಹಾಕಿ ಕೊಲ್ಲುತ್ತಾರೆಯೇ: ಸಿದ್ದರಾಮಯ್ಯ,ಡಿಕೆಶಿ ವಿರುದ್ಧ ಕಾರಜೋಳ ವ್ಯಂಗ್ಯ

ಉಕ್ರೇನ್​​ನಲ್ಲಿ ಕನ್ನಡಿಗರು ಸಿಲುಕಿದವರ ಬಗ್ಗೆ ದೇಶದ ಪ್ರಧಾನಿ ಮೋದಿಯವರು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಏರ್ ಲಿಫ್ಟ್ ಮಾಡುವುದಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳ ಪಾಲಕರಿಗೂ ಮನವಿ ಮಾಡುತ್ತೇನೆ, ಅವರ ಹೆಸರು ಮತ್ತು ಫೋನ್​​ ನಂಬರ್​​ನ್ನ ಜಿಲ್ಲಾಧಿಕಾರಿಗಳಿಗೆ ಕೊಡಿ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ.

ಗೋವಿಂದ ಕಾರಜೋಳ
ಗೋವಿಂದ ಕಾರಜೋಳ

By

Published : Feb 26, 2022, 5:28 PM IST

ಬಾಗಲಕೋಟೆ : ಸಿದ್ದರಾಮಯ್ಯ ಮತ್ತು ಡಿಕೆಶಿ ಮಧ್ಯೆ ನಾವೇಕೆ ಜಗಳ ಹಚ್ಚೋಣಾ, ಇದನ್ನ ರಾಜ್ಯದ ಜನರೇ ನೋಡುತ್ತಿದ್ದಾರೆ. ಹಾಲು ಕುಡಿದು ಸಾಯುವವರಿಗೆ ಯಾರಾದರೂ ವಿಷ ಹಾಕಿ ಕೊಲ್ಲುತ್ತಾರೆಯೇ ಎಂದು ಸಚಿವ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

ಸಿದ್ದರಾಮಯ್ಯ, ಡಿಕೆಶಿ ಕುರಿತು ಕಾರಜೋಳ ವ್ಯಂಗ್ಯ

ಮುಧೋಳ ಪಟ್ಟಣದಲ್ಲಿ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತ ಪಾದಯಾತ್ರೆ ಮಾಡಿದರು. ಅಧಿಕಾರಕ್ಕೆ ಬಂದ ಬಳಿಕ ಏನು ಮಾಡಲಿಲ್ಲ. ಕೂಡಲಸಂಗಮದ ಮೇಲೆ ಆಣೆ ಮಾಡಿದ್ದರೂ, ಆದರೂ ಅವರದ್ದು ಶೂನ್ಯ ಸಾಧನೆ ಇದೆ. ಏನು ಮಾಡದಿರೋದಕ್ಕೆ ಅವರಿಗೆ ಪಾಪ ಕಾಡುತ್ತಿದೆ ಎಂದು ವ್ಯಂಗ್ಯವಾಡಿದ ಅವರು ಆ ಪಾಪವನ್ನು ಪರಿಹಾರ ಮಾಡಿಕೊಳ್ಳಲು ಜನರಿಗೆ ಮೋಸ ಮಾಡುವ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ : ಉಕ್ರೇನ್‌ನಲ್ಲಿರುವ ರಾಜ್ಯದವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲ ರೀತಿಯ ಕ್ರಮ : ಸಿಎಂ ಬೊಮ್ಮಾಯಿ

ಉಕ್ರೇನ್​​ನಲ್ಲಿ ಕನ್ನಡಿಗರು ಸಿಲುಕಿದವರ ಬಗ್ಗೆ ಮಾತನಾಡಿ, ಈ ಬಗ್ಗೆ ದೇಶದ ಪ್ರಧಾನಿ ಮೋದಿಯವರು ಎಲ್ಲ ವ್ಯವಸ್ಥೆ ಮಾಡುತ್ತಿದ್ದಾರೆ. ಏರ್ ಲಿಫ್ಟ್ ಮಾಡುವುದಕ್ಕೆ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ವಿದ್ಯಾರ್ಥಿಗಳ ಪಾಲಕರಿಗೂ ಮನವಿ ಮಾಡುತ್ತೇನೆ, ಅವರ ಹೆಸರು ಮತ್ತು ಫೋನ್​​ ನಂಬರ್​ ಅ​ನ್ನು ಜಿಲ್ಲಾಧಿಕಾರಿಗಳಿಗೆ ಕೊಡಿ. ನಂತರ ಸರ್ಕಾರದಿಂದಲೇ ನಾವು ಮಾತನಾಡುತ್ತೇವೆ. ಚೀಫ್ ಸೆಕ್ರೆಟರಿಗೂ, ನೋಡಲ್ ಅಧಿಕಾರಿಗಳಿಗೂ ಕಳುಹಿಸಿಕೊಡಿ ಎಂದರು.

ಯಾರೂ ಈ ಬಗ್ಗೆ ಭಯಪಡಬೇಕಾದ ಅಗತ್ಯವಿಲ್ಲ ಎಂದ ಅವರು, ರಸ್ತೆ ಮಾರ್ಗದ ಮೂಲಕ ಉಕ್ರೇನ್ ನಲ್ಲಿ ಇರುವವರನ್ನ ಕರೆ ತರೋದು ಕಷ್ಟವಾಗಿದೆ. ಈಗಾಗಲೇ ನಮ್ಮ ಸರ್ಕಾರ ಸಹ ನೋಡಲ್ ಅಧಿಕಾರಿ ನೇಮಿಸಿ ಕೆಲಸ ಶುರು ಮಾಡಿದೆ. ದೇಶದ ಪ್ರಧಾನಿಗಳೂ ಸಹ ಆಯಾ ದೇಶಗಳ ಜೊತೆಯಲ್ಲಿ ಮಾತನಾಡಿದ್ದಾರೆ. ಭಾರತ ಸರ್ಕಾರ ಉಕ್ರೇನ್​​ನಲ್ಲಿ ಸಿಲುಕಿದವರನ್ನು ಸುರಕ್ಷಿತವಾಗಿ ಕರೆತರುವ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ ಎಂದು ತಿಳಿಸಿದರು.

For All Latest Updates

TAGGED:

ABOUT THE AUTHOR

...view details