ಕರ್ನಾಟಕ

karnataka

ETV Bharat / state

ನಾ ನಾಪತ್ತೆ ಆಗಿದ್ದೇನೋ, ಇಲ್ಲವೋ ಎಂದು ಚುನಾವಣೆ ನಂತರ ತಿಳಿಯುತ್ತೆ.. ಸತೀಶ್‌ಗೆ 'ಖಾರ'ಜೋಳ! - ಮಹಾನಗರ ಪಾಲಿಕೆ ಚುನಾವಣೆ

ಸತೀಶ್ ಜಾರಕಿಹೊಳಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀಗೆ ಹೇಳಿದ್ದರು. ಬಹಳ ಮಾತನಾಡಿದ್ರು. ಆಗಲೂ ನನ್ನ ನೇತೃತ್ವದಲ್ಲಿಯೇ ಗೆಲುವಾಗಿತ್ತು. ನಮ್ಮ ಪಕ್ಷದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಮ್ಮ ಪಕ್ಷದ ತತ್ವ ಸಿದ್ಧಾಂತದ ಮೇಲೆ ಆಯ್ಕೆಯಾದವರು. ಅವರೆಲ್ಲರ ಮೇಲೆ ವಿಶ್ವಾಸ ಇದೆ. ಆದ್ರೆ, ಕಾಂಗ್ರೆಸ್‌ಗೆ ಬಂಡಾಯದ ಭೀತಿ ಕಾಡುತ್ತಿದೆ. 20 ಸ್ಥಾನಗಳಲ್ಲಿ 15ರಲ್ಲಿ ಗೆಲುವು ನಿಶ್ಚಿತ ಎಂದು ಕಾರಜೋಳ ಹೇಳಿದರು..

ಜಾರಕಿಹೊಳಿಗೆ ಕಾರಜೋಳ ಟಾಂಗ್
ಜಾರಕಿಹೊಳಿಗೆ ಕಾರಜೋಳ ಟಾಂಗ್

By

Published : Dec 1, 2021, 4:04 PM IST

ಬಾಗಲಕೋಟೆ : ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ. ನಾನು ನಾಪತ್ತೆ ಆಗಿದ್ದೇನೋ, ಬಿಟ್ಟಿದ್ದೇನೋ ಎಂಬುದು ವಿಧಾನ ಪರಿಷತ್ ಚುನಾವಣೆ ನಂತರ ಗೊತ್ತಾಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.

ಸತೀಶ್‌ ಜಾರಕಿಹೊಳಿಗೆ ಕಾರಜೋಳ ಟಾಂಗ್..

ಬೆಳಗಾವಿಯಲ್ಲಿ ಕಾಂಗ್ರೆಸ್ಸಿನವರಿಗೆ ಸೋಲಿನ ಭಯ ಕಾಡುತ್ತಿದೆ. ಕಾಂಗ್ರೆಸ್‌ನವರಿಗೆ ಬಂಡಾಯದ ಭೀತಿ ಕಾಡುತ್ತಿದೆ. ಬಂಡಾಯದಿಂದ ಕಾಂಗ್ರೆಸ್ ಅಭ್ಯರ್ಥಿ ಸೋಲುತ್ತಾರೆ.

ಹೀಗಾಗಿ, ಇಂತಹ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾನು ಸತೀಶ್ ಜಾರಕಿಹೊಳಿ ಅವರಿಗೆ ಹೇಳ ಬಯಸುತ್ತೇನೆ. ಕಾಂಗ್ರೆಸ್ ಸೋಲು ನಿಶ್ಚಿತ, ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದರು.

ಸತೀಶ್ ಜಾರಕಿಹೊಳಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹೀಗೆ ಹೇಳಿದ್ದರು. ಬಹಳ ಮಾತನಾಡಿದ್ರು. ಆಗಲೂ ನನ್ನ ನೇತೃತ್ವದಲ್ಲಿಯೇ ಗೆಲುವಾಗಿತ್ತು. ನಮ್ಮ ಪಕ್ಷದ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ನಮ್ಮ ಪಕ್ಷದ ತತ್ವ ಸಿದ್ಧಾಂತದ ಮೇಲೆ ಆಯ್ಕೆಯಾದವರು.

ಅವರೆಲ್ಲರ ಮೇಲೆ ವಿಶ್ವಾಸ ಇದೆ. ಆದ್ರೆ, ಕಾಂಗ್ರೆಸ್‌ಗೆ ಬಂಡಾಯದ ಭೀತಿ ಕಾಡುತ್ತಿದೆ. 20 ಸ್ಥಾನಗಳಲ್ಲಿ 15ರಲ್ಲಿ ಗೆಲುವು ನಿಶ್ಚಿತ ಎಂದು ಕಾರಜೋಳ ಹೇಳಿದರು.

ಗೋವಿಂದ ಕಾರಜೋಳ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆ ಬಿಜೆಪಿ ಪಕ್ಷದ ಅಭ್ಯರ್ಥಿ ಪಿ ಹೆಚ್ ಪೂಜಾರ ಅವರ ಪರವಾಗಿ ವಿಜಯಪುರ, ಬಾಗಲಕೋಟೆ ಅವಳಿ ಜಿಲ್ಲೆಯಲ್ಲಿ ಪ್ರವಾಸ ಹಮ್ಮಿಕೊಂಡು ಪ್ರಚಾರ ಮಾಡುವ ಜೊತೆಗೆ, ಗೆಲುವಿನ ರಣತಂತ್ರ ರೂಪಿಸುತ್ತಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಇಳಕಲ್ಲ, ಬಾಗಲಕೋಟೆ, ಬಾದಾಮಿ, ಮುಧೋಳ ಸೇರಿದಂತೆ ವಿವಿಧೆಡೆ ಪ್ರವಾಸ ಹಮ್ಮಿಕೊಂಡು ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ :ಲಖನ್ ಜಾರಕಿಹೊಳಿ‌ ಬಿಜೆಪಿಯ 'ಬಿ' ಟೀಂ ಇದ್ದಂತೆ ; ಸತೀಶ್ ಜಾರಕಿಹೊಳಿ‌ ವ್ಯಂಗ್ಯ

ABOUT THE AUTHOR

...view details