ಬಾಗಲಕೋಟೆ:ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆಯಲ್ಲಿ ಹೊರಟ ವಲಸೆ ಕಾರ್ಮಿಕರು ಬಾಗಲಕೋಟೆ ಗಡಿ ತಲುಪಿದ್ದಾರೆ.
ಬೆಂಗಳೂರಿಂದ ಕಾಲ್ನಡಿಗೆಯಲ್ಲೇ ಬಾಗಲಕೋಟೆ ತಲುಪಿದ ಮಧ್ಯಪ್ರದೇಶದ ಕಾರ್ಮಿಕರು - ಬಾಗಲಕೋಟೆ ಸುದ್ದಿ
ಲಾಕ್ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ಕಾಲ್ನಡಿಗೆ ಮೂಲಕ ಹೊರಟ ವಲಸೆ ಕಾರ್ಮಿಕರು ಬಾಗಲಕೋಟೆ ಗಡಿ ತಲುಪಿದ್ದಾರೆ. ಇಲ್ಲಿಂದ ಬೀಳಗಿ ಮಾರ್ಗದ ಮೂಲಕ ವಿಜಯಪುರಕ್ಕೆ ತೆರಳಿ, ಅಲ್ಲಿಂದ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ.

ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ಬಾಗಲಕೋಟೆ ತಲುಪಿದ ಮಧ್ಯಪ್ರದೇಶದ ವಲಸೆ ಕಾರ್ಮಿಕರು
ಬೆಂಗಳೂರಿನಿಂದ ಕಾಲ್ನಡಿಗೆಯಲ್ಲಿ ಹೊರಟು ಬಾಗಲಕೋಟೆ ತಲುಪಿದ ಮಧ್ಯಪ್ರದೇಶದ ವಲಸೆ ಕಾರ್ಮಿಕರು
15 ಕಾರ್ಮಿಕ ತಂಡ ಏಳು ದಿನಗಳ ನಿರಂತರ ನಡಿಗೆಯ ಬಳಿಕ ಬಾಗಲಕೋಟೆ ತಲುಪಿದ್ದು, ಇಲ್ಲಿಂದ ಬೀಳಗಿ ಮಾರ್ಗದ ಮೂಲಕ ವಿಜಯಪುರಕ್ಕೆ ಹೋಗಲಿದ್ದಾರೆ. ಬಳಿಕ ಮಹಾರಾಷ್ಟ್ರಕ್ಕೆ ತೆರಳಿ, ಅಲ್ಲಿಂದ ತವರು ರಾಜ್ಯ ಮಧ್ಯಪ್ರದೇಶಕ್ಕೆ ತೆರಳಲಿದ್ದಾರೆ.
ಹೀಗೆ ನಡೆದು ಹೊರಟಿದ್ದ ಕಾರ್ಮಿಕರಿಗೆ ಬೀಳಗಿ ಎಪಿಎಂಸಿ ಅಧ್ಯಕ್ಷ ಗುರಪ್ಪ ಊಟ ಹಾಗೂ ಧನಸಹಾಯ ನೀಡಿದರು.