ಕರ್ನಾಟಕ

karnataka

ETV Bharat / state

ಪರೀಕ್ಷೆಯಲ್ಲಿ ಸಾಮೂಹಿಕ ನಕಲು: ವಿಷಯ ಒಂದಕ್ಕೆ 10 ಸಾವಿರ ವಸೂಲಿ ಆರೋಪ - ಢವಳೇಶ್ವರ ಪುನರ್ ವಸತಿ ಕೇಂದ್ರ

ಢವಳೇಶ್ವರದ ಸರ್.‌ಎಂ. ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ. ಸಿಬ್ಬಂದಿಯೇ ನಕಲು ಮಾಡಲು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಪರೀಕ್ಷೆಯಲ್ಲಿ ಸಾಮೂಹಿಕ ನಕಲು

By

Published : Nov 19, 2019, 6:46 PM IST

ಬಾಗಲಕೋಟೆ:ಪದವಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಢವಳೇಶ್ವರ ಪುನರ್ ವಸತಿ ಕೇಂದ್ರದಲ್ಲಿ ನಡೆದಿದೆ ಎನ್ನಲಾಗಿದೆ.

ಢವಳೇಶ್ವರದ ಸರ್.‌ಎಂ. ವಿಶ್ವೇಶ್ವರಯ್ಯ ಬಿಬಿಎ ಕಾಲೇಜಿನಲ್ಲಿ ಈ ಸಾಮೂಹಿಕ ನಕಲು ನಡೆದಿದೆ.‌ ಕಾಲೇಜಿನ ಸಿಬ್ಬಂದಿಯಿಂದಲೇ ನಕಲು ಮಾಡಲು ಕುಮ್ಮಕ್ಕು ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೆ ನಕಲು ಮಾಡಲು ವಿಷಯ ಒಂದಕ್ಕೆ 10 ಸಾವಿರ ಹಣವನ್ನು ಸಿಬ್ಬಂದಿ ವಸೂಲಿ‌ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಪರೀಕ್ಷೆಯಲ್ಲಿ ಸಾಮೂಹಿಕ ನಕಲು

ಬೆಳಗಾವಿಯ ರಾಣಿ ಚೆನ್ನಮ್ಮ ಯೂನಿವರ್ಸಿಟಿ ಅಧೀನದಲ್ಲಿರುವ ಕಾಲೇಜು ಇದಾಗಿದೆ. ಪ್ರತಿ ವರ್ಷ ನಡೆಯುವ ಪರೀಕ್ಷೆಯಲ್ಲಿ ಹಣ ಪಡೆದು ಸಾಮೂಹಿಕ ನಕಲು ಮಾಡುವ ಮೂಲಕ ಪಾಸ್​​ ಮಾಡಿಸಲಾಗುತ್ತದೆ ಎಂಬ ಆರೋಪ ಕೇಳಿ ಬರುತ್ತಿದೆ.

ABOUT THE AUTHOR

...view details