ಕರ್ನಾಟಕ

karnataka

ಬಾಗಲಕೋಟೆಯಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘಿಸಿ ಮದುವೆ: 60 ಜನರ ವಿರುದ್ಧ ಪ್ರಕರಣ ದಾಖಲು

By

Published : Jul 6, 2020, 6:46 PM IST

ಲಾಕ್​ಡೌನ್​ ನಿಯಮ ಉಲ್ಲಂಘಿಸಿ ನಡೆದ ಎರಡು ಮದುವೆಯಿಂದಾಗಿ ಹೆಚ್ಚಾಗಿ ಕೊರೊನಾ ಸೋಂಕು ಹರಡಿದ್ದು, ಈ‌ ಹಿನ್ನೆಲೆಯಲ್ಲಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದಕ್ಕೆ 60ಕ್ಕೂ ಹೆಚ್ಚು ‌ಪ್ರಕರಣ‌ ದಾಖಲಿಸಲಾಗಿದೆ.

District Police Superintendent Lokesh Jagalasara
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ

ಬಾಗಲಕೋಟೆ:ಸರ್ಕಾರದ ಲಾಕ್​ಡೌನ್ ನಿಯಮಗಳನ್ನು ಉಲ್ಲಂಘಿಸಿ ವಿವಾಹ ಮಾಡಿದವರು ಸೇರಿ 60 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ಉಲ್ಲಂಘಿಸಿ ನಡೆದ ಎರಡು ಮದುವೆ ಕಾರ್ಯಕ್ರಮಗಳಿಂದ ‌ಜಿಲ್ಲೆಯಲ್ಲಿ ಕೊರೊನಾ‌‌‌ ಸ್ಫೋಟಗೊಂಡಿದೆ ಎಂದರು.

ಮಾಧ್ಯಮಗಳ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಸಾರ

ಫ್ಲೈಯಿಂಗ್‌ ಸ್ಕ್ಯಾಡ್ ತಂಡಗಳನ್ನು ನೇಮಕ ಮಾಡಲಾಗಿದ್ದು, ತಂಡದಲ್ಲಿ ಕಂದಾಯ ಹಾಗೂ‌ ಪೊಲೀಸ್ ಇಲಾಖೆ ಸಿಬ್ಬಂದಿ ಇದ್ದಾರೆ. 36 ತಂಡಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮಾಸ್ಕ್​​​​​​, ಸ್ಯಾನಿಟೈಸರ್ ಬಳಸದಿರುವುದು ಸೇರಿ ಎಲ್ಲವನ್ನೂ ಗಮನಹರಿಸಿ ದಂಡ ಸಹ ಹಾಕಲಾಗುತ್ತದೆ ಎಂದರು.

ABOUT THE AUTHOR

...view details