ಕರ್ನಾಟಕ

karnataka

ETV Bharat / state

ವರನ ತಾಯಿಗೆ ಕೊರೊನಾ ಪಾಸಿಟಿವ್: ಮದುವೆ ರದ್ದು..! - Marriage cancellation

ವರನ ತಾಯಿಗೆ ಕೊರೊನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಬಂದಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಗುಳೇದಗುಡ್ಡ ತಾಲೂಕು ಆಡಳಿತ ಸಿಬ್ಬಂದಿ ಮಾಹಿತಿ ಪಡೆದುಕೊಂಡು ಮದುವೆ ರದ್ದು ಮಾಡಿಸಿದ್ದಾರೆ.

Marriage cancellation
ಕೊರೊನಾ ಭೀತಿ ಹಿನ್ನೆಲೆ ಗುಳೇದಗುಡ್ಡ ನಗರದಲ್ಲಿ ಮದುವೆ ರದ್ದು ಮಾಡಿದ ಅಧಿಕಾರಿಗಳು

By

Published : Jun 26, 2020, 6:00 PM IST

ಬಾಗಲಕೋಟೆ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ತಾಲೂಕ ಆಡಳಿತವು ಗುಳೇದಗುಡ್ಡ ನಗರದಲ್ಲಿ ನಡೆಯುತ್ತಿದ್ದ ಮದುವೆ ರದ್ದು ಮಾಡಿಸಿದೆ. ಬಳ್ಳಾರಿಯ ಯುವಕನ ಜೊತೆ ಇಂದು ಗುಳೇದಗುಡ್ಡದ ಯುವತಿ ಮದುವೆ ನಡೆಯಬೇಕಿತ್ತು. ವರನ ತಾಯಿಗೆ ಕೊರೊನಾ ಪಾಸಿಟಿವ್ ಇದೆ ಎನ್ನುವ ಮಾಹಿತಿ ಬಂದಿದ್ದು, ಬಳ್ಳಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಮದುವೆಯನ್ನು ರದ್ದು ಮಾಡಲಾಗಿದೆ.

ವರ ಹಾಗೂ ಸಂಬಂಧಿಕರು ಬಳ್ಳಾರಿಯಿಂದ ಬಸ್ನಲ್ಲಿ ಮದುವೆಗೆ ಬಂದಿದ್ದು, ಈ ವಿಷಯ ತಿಳಿದು ರಾತ್ರಿಯೇ ಸ್ಥಳಕ್ಕೆ ತೆರಳಿದ ಗುಳೇದಗುಡ್ಡ ತಾಲೂಕು ಆಡಳಿತ ಸಿಬ್ಬಂದಿ ಮಾಹಿತಿ ಪಡೆದುಕೊಂಡು ಮದುವೆ ರದ್ದು ಮಾಡಿಸಿ ಬಂದವರನ್ನು ವಾಪಸ್​ ಕಳಿಸಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆ ಗುಳೇದಗುಡ್ಡ ನಗರದಲ್ಲಿ ಮದುವೆ ರದ್ದು ಮಾಡಿದ ಅಧಿಕಾರಿಗಳು

ಗುಳೇದಗುಡ್ಡದ ಮರಡಿ ಮಠದ ಹತ್ತಿರ ಇರುವ ಹೆಣ್ಣಿನ ಮನೆಯ ಮುಂದೆ ಮದುವೆ ನಡೆಯಬೇಕಿತ್ತು. ಇದೀಗ ಮದುವೆ ನಡೆಯಬೇಕಿದ್ದ ಪ್ರದೇಶವನ್ನು ಸಾನಿಟೈಸ್​ ಮಾಡಿ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಗಂಗಪ್ಪ ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

ABOUT THE AUTHOR

...view details