ಕರ್ನಾಟಕ

karnataka

ETV Bharat / state

'ಯಾರೋ ಕುಳಿತುಕೊಂಡು ಇಂಥವರೇ ಸಿಎಂ ಆಗ್ಬೇಕು, ಆಗ್ಬಾರ್ದು ಅಂದ್ರೆ ಅದು ಡಿಕ್ಟೇಟರ್‌ಶಿಪ್ ಆಗುತ್ತೆ' - ಭಾರತಾಂಬೆ

ನಾವೆಲ್ಲ ಭಾರತೀಯರು ಒಂದೇ ಎಂಬ ಉದಾತ್ತ ಭಾವನೆ ಬೆಳೆಸಿಕೊಂಡು ಮುಂದುವರಿದರೆ ದೇಶದ ಅಭಿವೃದ್ದಿ ಆಗುತ್ತದೆ ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು. ಹೆಚ್‌ಡಿಕೆ ಹಾಗೂ ಸಿದ್ದರಾಮಯ್ಯನವರ ವಿವಾದಿತ ಹೇಳಿಕೆಗಳಿಗೆ ಶ್ರೀಗಳು ಪ್ರತಿಕ್ರಿಯಿಸಿದರು.

Subudendra Theertha Swamiji
ಮಂತ್ರಾಲಯದ ಸುಬುದೇಂದ್ರ ತೀರ್ಥ ಸ್ವಾಮೀಜಿ

By

Published : Feb 7, 2023, 7:39 PM IST

Updated : Feb 7, 2023, 8:32 PM IST

ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಪ್ರತಿಕ್ರಿಯೆ

ಬಾಗಲಕೋಟೆ: "ಯಾರು ಸಿಎಂ ಆಗಬೇಕು, ಆಗಬಾರದು ಎಂಬುದನ್ನು ಮತದಾರರು ಹಾಗೂ ಪಕ್ಷಗಳು ನಿರ್ಧರಿಸುತ್ತವೆ. ಮತದಾರರು ಪ್ರಲ್ಹಾದ್ ಜೋಶಿ ಆಗಬಾರದು ಅಂದ್ರೆ, ಆ ವಿಚಾರ ಬೇರೆ. ವ್ಯಕ್ತಿಗಳು ಯಾರೋ ಕುಳಿತುಕೊಂಡು ಇಂಥವರೇ ಆಗಬೇಕು, ಇಂಥವರು ಆಗಬಾರದು ಅಂದ್ರೆ ಅದು ಡೆಮಾಕ್ರಟಿಕ್ ವ್ಯವಸ್ಥೆ ಆಗಲ್ಲ. ಅದು ಡಿಕ್ಟೇಟರ್‌ಶಿಪ್ ಆಗುತ್ತದೆ" ಎಂದು ಮಂತ್ರಾಲಯದ ಸುಬುಧೇಂದ್ರ ತೀರ್ಥ ಶ್ರೀ ಹೇಳಿದರು.

ಬಾಗಲಕೋಟೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ತರಹದ ಮಾತುಗಳು ಅರ್ಥಹೀನ. ನಾವೆಲ್ಲ ಭಾರತೀಯರು ಒಂದೇ ಎಂಬ ಉದಾತ್ತ ಭಾವನೆ ಬೆಳೆಸಿಕೊಂಡು ಮುಂದುವರಿದರೆ ದೇಶದ ಅಭಿವೃದ್ದಿ ಆಗುತ್ತದೆ. ನಾವೆಲ್ಲರೂ ಒಂದೇ ತಾಯಿ ಭಾರತಾಂಬೆಯ ಮಕ್ಕಳು." ಮುಂದುವರೆದು ಮಾತನಾಡಿದ ಅವರು, "ರಾಜ್ಯಗಳಲ್ಲಿ, ಜಾತಿಗಳಲ್ಲಿ, ಪರಸ್ಪರ ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯಗಳು ಬಂದರೆ ಅದು ದೇಶ, ರಾಜ್ಯದ ಅಭಿವೃದ್ದಿ, ಜನರ ಕಲ್ಯಾಣಕ್ಕೆ ಅಡ್ಡಿಯಾಗುತ್ತದೆ" ಎಂದು ಹೇಳಿದರು.

ಸಿದ್ದರಾಮಯ್ಯಗೆ ತಿರುಗೇಟು: ನಾನೂ ಹಿಂದೂ, ಆದ್ರೆ ಹಿಂದುತ್ವ ಒಪ್ಪಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತೀಕ್ಷ್ಣ ತಿರುಗೇಟು ನೀಡಿದ ಶ್ರೀಗಳು, "ಈ ದ್ಚಂದ್ವ ಹೇಳಿಕೆಯಲ್ಲಿ ಅರ್ಥವೇ ಇಲ್ಲ. ನಾನು ಹಿಂದೂ ಅಂದ ಮೇಲೆ ಹಿಂದುತ್ವವನ್ನು ಅಳವಡಿಸಿಕೊಂಡು ಆಧರಿಸಲೇಬೇಕು. ಹಾಗಾದ್ರೆ ಯಾವ ಹಿನ್ನೆಲೆಯಲ್ಲಿ ಅವರು ಆ ಭಾವನೆ ವ್ಯಕ್ತಪಡಿಸುತ್ತಾರೆ" ಎಂದು ಪ್ರಶ್ನಿಸಿದರು. "ನಾನು ಹಿಂದೂ ಆಗಿದ್ದ ಮೇಲೆ ನಾವು ಗೌರವ ಕೊಡಲೇಬೇಕು. ಯಾವುದಾದ್ರೂ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಆ ವಿಚಾರಗಳನ್ನು ವಿನಿಮಯ ಮಾಡಿಕೊಂಡು ಪರಿಸಿಕೊಳ್ಳಬೇಕು. ಹಿಂದೂ ಎಂದು ಹಿಂದುತ್ವ ವಿರೋಧಿಸುವಂತಿದ್ದರೆ ಅದು ಅರ್ಥಹೀನ" ಎಂದು ವಿಶ್ಲೇಷಿಸಿದರು.

ಎಚ್​ಡಿಕೆ ಹೇಳಿಕೆಗೆ ಬೇಸರ: ಇತ್ತೀಚೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು, "ಪ್ರಹ್ಲಾದ್ ಜೋಶಿ ಅವರನ್ನು ಬಿಜೆಪಿ ಮುಂದಿನ ಸಿಎಂ ಮಾಡಲು ಆರ್‌ಎಸ್‌ಎಸ್ ನಿರ್ಧಾರ ಮಾಡಿದೆ. ಅವರು ಶೃಂಗೇರಿ ಮಠ ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವರ್ಗಕ್ಕೆ ಸೇರಿದವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ. ನಮ್ಮ ಭಾಗದ ಹಳೇ ಮೈಸೂರು ಭಾಗದ ಬ್ರಾಹ್ಮಣ ವರ್ಗಕ್ಕೆ ಸೇರಿದವರಲ್ಲ" ಎಂದು ಟೀಕಿಸಿದ್ದರು.

ಇದನ್ನೂಓದಿ:ಕುಮಾರಸ್ವಾಮಿ ಹೇಳಿಕೆಗೆ ಖಂಡನೆ: ಕ್ಷಮೆಯಾಚನೆಗೆ ಸಚಿವ ಅಶ್ವತ್ಥ ನಾರಾಯಣ್ ಆಗ್ರಹ

Last Updated : Feb 7, 2023, 8:32 PM IST

ABOUT THE AUTHOR

...view details