ಬಾಗಲಕೋಟೆ:ಕೊರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಹೇರಿದ ಪರಿಣಾಮ ಹೋಟೆಲ್ ಉದ್ಯಮಕ್ಕೆ ಭಾರಿ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿರುವ ಲಿಂಗಾಯತ ಖಾನಾವಳಿಗಳು ಬಂದ್ ಆಗಿರುವ ಪರಿಣಾಮ ಸಾಕಷ್ಟು ತೊಂದರೆ ಉಂಟಾಗಿದೆ.
ಲಾಕ್ಡೌನ್ನಿಂದ ಭಾರೀ ನಷ್ಟ: ಪರಿಹಾರ ನೀಡುವಂತೆ ಲಿಂಗಾಯತ ಖಾನಾವಳಿ ಮಾಲೀಕರ ಮನವಿ - ಕೊರೊನಾ ವೈರಸ್ ಭೀತಿ
ಬಡ ಹಾಗೂ ಮಧ್ಯಮ ವರ್ಗದವರಾದ ಬಣಜಿಗರು, ಗಾಣಿಗರು ಹಾಗೂ ಪಂಚಮಸಾಲಿ ಸಮುದಾಯ ಸೇರಿದಂತೆ ಇತರ ಸಮುದಾಯದವರು ಲಿಂಗಾಯತ ಖಾನಾವಳಿ ಇಟ್ಟುಕೊಂಡು ಉಪ ಜೀವನ ಸಾಗಿಸುತ್ತಿದ್ದರು. ಆದರೆ ಲಾಕ್ಡೌನ್ ಇವರ ಜೀವನದ ಮೇಲೆ ಭಾರೀ ಹೊಡೆತ ಕೊಟ್ಟಿದೆ.
ಬಡ ಹಾಗೂ ಮಧ್ಯಮ ವರ್ಗದವರಾದ ಬಣಜಿಗರು, ಗಾಣಿಗರು ಹಾಗೂ ಪಂಚಮಸಾಲಿ ಸಮುದಾಯ ಸೇರಿದಂತೆ ಇತರ ಸಮುದಾಯದವರು ಲಿಂಗಾಯತ ಖಾನಾವಳಿ ಇಟ್ಟುಕೊಂಡು ಉಪ ಜೀವನ ಸಾಗಿಸುತ್ತಿದ್ದರು. ಜಿಲ್ಲೆಯ ಏಳು ತಾಲೂಕು ಕೇಂದ್ರದಲ್ಲಿ ಸುಮಾರು 500ಕ್ಕೂ ಹೆಚ್ಚು ಲಿಂಗಾಯತ ಖಾನಾವಳಿ ತೆರೆದು ಜೀವನ ಸಾಗಿಸುತ್ತಿದ್ದರು. ಆಫೀಸ್ ಕೆಲಸ ಸೇರಿದಂತೆ ಮಾರುಕಟ್ಟೆ ಸಾಮಗ್ರಿಗಳ ಖರೀದಿಗೆ, ಆಸ್ಪತ್ರೆ ಚಿಕಿತ್ಸೆ ಸೇರಿದಂತೆ ಇತರ ಯಾವುದೇ ಕೆಲಸಕ್ಕೆ ಬಂದರೂ ಜನರು ಲಿಂಗಾಯತ ಖಾನಾವಳಿಗೆ ಹೋಗಿ ಊಟ ಮಾಡುತ್ತಿದ್ದರು.
ಉತ್ತರ ಕರ್ನಾಟಕ ಶೈಲಿ ಊಟವಾಗಿರುವ ಜೋಳದ ರೊಟ್ಟಿ, ಕಾಯಿಪಲ್ಲೆ, ಚಟ್ನಿ, ಮೊಸರು, ಅನ್ನ-ಸಾರು ಹಾಗೂ ಬದನೆಕಾಯಿ ಪಲ್ಲೆ ರುಚಿಯನ್ನು ಗ್ರಾಹಕರು ಸವಿಯುತ್ತಿದ್ದರು. ಒಂದು ಊಟಕ್ಕೆ 60ರಿಂದ 70 ರೂ. ನಿಗದಿಗೊಳಿಸಲಾಗಿದೆ. ಆದರೆ ಒಂದು ತಿಂಗಳಿನಿಂದಲೂ ಬಂದ್ ಆಗಿರುವ ಹಿನ್ನೆಲೆ ಜೀವನಕ್ಕೆ ತೊಂದರೆ ಪಡುವಂತಾಗಿದೆ. ಹೀಗಾಗಿ ಸರ್ಕಾರ ಪರಿಹಾರ ನೀಡುವಂತೆ ಲಿಂಗಾಯತ ಖಾನಾವಳಿ ಮಾಲೀಕರು ವಿನಂತಿಸಿಕೊಂಡಿದ್ದಾರೆ.