ಕರ್ನಾಟಕ

karnataka

ETV Bharat / state

ಖಾರ ಅರೆಯುವ ಕಲ್ಲಿನಿಂದ ಹೊಡೆದು ಸೋದರ ಅಳಿಯನನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ - life imprisonment for murder accused

ಸೋದರ ಅಳಿಯನನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿ ಜಮಖಂಡಿ ಕೋರ್ಟ್​ ತೀರ್ಪು ನೀಡಿದೆ.

ಸೋದರ ಅಳಿಯನನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ
ಸೋದರ ಅಳಿಯನನ್ನು ಕೊಲೆಗೈದ ಆರೋಪಿಗೆ ಜೀವಾವಧಿ ಶಿಕ್ಷೆ

By

Published : Jun 17, 2020, 7:28 PM IST

ಬಾಗಲಕೋಟೆ: ಸೋದರಳಿಯನನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ಐದು ಸಾವಿರ ದಂಡ ವಿಧಿಸಿ ಜಮಖಂಡಿಯ 1 ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಎ.ಕೆ.ನವೀನ ಕುಮಾರಿ ತೀರ್ಪು ನೀಡಿದ್ದಾರೆ.

ಮುಧೋಳ ತಾಲೂಕಿನ ಹಲಗಲಿ ಗ್ರಾಮದ ಲಕ್ಷ್ಮಪ್ಪ ಕಳಸಕೊಪ್ಪ ಉರ್ಫ್​ ಚಿಗರಿ ಎಂಬುವವರ ಮಗಳಾದ ಸವಿತಾಳನ್ನು ಬೀಳಗಿ ತಾಲೂಕಿನ ಯಡಹಳ್ಳಿ ಗ್ರಾಮದ ಯಲ್ಲಪ್ಪ ಕಾಳಪ್ಪಗೋಳ ಎಂಬುವರೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಈ ದಂಪತಿಗೆ ಅವಿನಾಶ ಎಂಬ ಮೂರು ವರ್ಷದ ಗಂಡು ಮಗುವಿತ್ತು. ನಂತರ ದಂಪತಿ ನಡುವೆ ವೈಮನಸ್ಸು ಉಂಟಾಗಿ, ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ಮಾಡಿದರೂ ಬಗೆಹರಿಯಲಾರದ ಕಾರಣ ಸವಿತಾ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ವಾಸವಿದ್ದಳು.

ಇದರಿಂದ ಸಿಟ್ಟಾದ ಸವಿತಾಳ ಸಹೋದರ ಈರಪ್ಪ ಹಲವಾರು ಬಾರಿ ಇದೇ ವಿಚಾರವಾಗಿ ಆಕೆಯೊಂದಿಗೆ ಜಗಳವಾಡಿ, ಕೊಲೆ ಬೆದರಿಕೆ ಹಾಕುತ್ತಿದ್ದ ಎನ್ನಲಾಗಿದೆ. 31 ಮಾರ್ಚ್​ 2018 ರಂದು ಮಧ್ಯಾಹ್ನ ಎರಡು ಗಂಟೆ ಸಮಯದಲ್ಲಿ ಸವಿತಾ ತನ್ನ ಮಗನನ್ನು ತಾಯಿ ಮಹಾದೇವಿಯೊಂದಿಗೆ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಳು. ಈ ವೇಳೆ ಈರಪ್ಪ, ಮನೆಯಲ್ಲಿದ್ದ ಖಾರ ಅರೆಯುವ ಕಲ್ಲಿನಿಂದ ಮಗುವಿನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಇದರಿಂದ ಗಂಭೀರ ಗಾಯಗೊಂಡಿರುವ ಮಗುವನ್ನು ಆಸ್ಪತ್ರೆಗೆ ಚಿಕಿತ್ಸೆ ತೆಗೆದುಕೊಂಡು ಹೋಗುವ ಸಮಯದಲ್ಲಿ ಮಗು ಮೃತ ಪಟ್ಟಿದೆ.

ಈ ಹಿನ್ನೆಲೆಯಲ್ಲಿ ಸವಿತಾ ತನ್ನ ಅಣ್ಣ ಈರಪ್ಪನ ಮೇಲೆ ದೂರು ನೀಡಿದ್ದಳು. ಮುಧೋಳ ವೃತ್ತದ ಸಿಪಿಐ ಕರಿಯಪ್ಪ ಬನ್ನೆ ಆರೋಪಿ ವಿರುದ್ಧ ಸೆಕ್ಷನ್​ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ABOUT THE AUTHOR

...view details