ಕರ್ನಾಟಕ

karnataka

By

Published : Jun 13, 2020, 11:06 AM IST

ETV Bharat / state

ಯುವಕನ ಕೊಲೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬಾಗಲಕೋಟೆ ಕೋರ್ಟ್

ಬಾಗಲಕೋಟೆ ಜಿಲ್ಲೆ ಹುಲ್ಯಾಳ ಗ್ರಾಮದಲ್ಲಿ ನಡೆದಿದ್ದ ಯುವಕನೋರ್ವನ ಭೀಕರ ಕೊಲೆ ಪ್ರಕರಣದ ಆರೋಪಿಗಳಾಗಿದ್ದ ಐವರಿಗೆ ನಗರದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

life imprisonment  for 5 accuses
ಕೊಲೆ ಪ್ರಕರಣ

ಬಾಗಲಕೋಟೆ:ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣ ಸಂಬಂಧ ಐದು ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 52 ಸಾವಿರ ರೂಪಾಯಿಗಳ ದಂಡ ವಿಧಿಸಿ ನಗರದ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಎ.ಕೆ.ನವೀನಕುಮಾರಿ ಆದೇಶ ಹೊರಡಿಸಿದ್ದಾರೆ.

ದಂಡದ ಹಣದಲ್ಲಿ 2.5 ಲಕ್ಷ ರೂಪಾಯಿಗಳ ಮೊತ್ತವನ್ನು ಮೃತನ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡಬೇಕು ಎಂದು ತಿಳಿಸಲಾಗಿದೆ. ಹುಲ್ಯಾಳ ಗ್ರಾಮದ ದುಂಡಪ್ಪ ಭೀಮಪ್ಪ ಹಲಗಲಿ,ಸಿದ್ದಪ್ಪ ಭೀಮಪ್ಪ ಹಲಗಲಿ, ಪರಸಪ್ಪ ಕಲ್ಲೋಳ್ಳಿ, ಹನಮಂತ ಕಲ್ಲೋಳ್ಳಿ ಹಾಗೂ ಮಂಜುನಾಥ ಗೊಂಗಾಗೋಳ ಶಿಕ್ಷೆಗೆ ಒಳಗಾದವರು.
ಘಟನೆಯ ವಿವರ:

ಕೊಲೆಯಾದ ಯುವಕ ಸದಾಶಿವ ಕೆಸರಗೊಪ್ಪ ಎಂಬುವನು ದುಂಡಪ್ಪ ಹಲಗಲಿ ಮತ್ತು ಸಿದ್ದಪ್ಪ ಹಡಗಲಿ ಎಂಬುವವರ ಸಹೋದರಿಯನ್ನು ಪ್ರೀತಿಸುತ್ತಿದ್ದು, ಅವಳ ಹಿಂದೆ ಸುತ್ತಾಡುತ್ತಿದ್ದನಂತೆ. ಇದರಿಂದ ರೋಸಿ ಹೋಗಿದ್ದ ಸಹೋದರರು 2017 ರ ಡಿಸೆಂಬರ್ 7 ರಂದು ರಾತ್ರಿ 10 ಗಂಟೆಗೆ ಸದಾಶಿವನನ್ನು ಪಾರ್ಟಿಗೆಂದು ಕರೆದು ಗ್ರಾಮದ ಸರ್ಕಾರಿ ಕನ್ನಡ ಶಾಲೆ ಕೊಠಡಿಯಲ್ಲಿ ಮುಂಭಾಗ ತಲೆ, ಮುಖ, ಎದೆ ಮೇಲೆ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರು.

ಈ ಬಗ್ಗೆ ಗ್ರಾಮದ ಕರೆಪ್ಪ ಭೀಮಪ್ಪ ಕೆಸರಗೊಪ್ಪ ಎಂಬುವರು ಪೊಲೀಸರಿಗೆ ದೂರು ನೀಡಿದ್ದರು. ಅಂದಿನ ಗ್ರಾಮೀಣ ಪಿಎಸ್​​ಐ ಪಿ.ಎಂ.ಪಟಾತರ, ಸಿಪಿಐ ಅಶೋಕ ಸದಲಗಿ ಪ್ರಕರಣದ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.

ABOUT THE AUTHOR

...view details