ಬಾಗಲಕೋಟೆ: ಕೇಂದ್ರದ ಅಮೃತ ಯೋಜನೆಯಡಿ ವಿವಿಧ ಕಾಮಗಾರಿಗಳಿಗೆ ಸಂಸದ ಪಿ.ಸಿ.ಗದ್ದಿಗೌಡರ ಚಾಲನೆ ನೀಡಿದರು.
1,035 ಲಕ್ಷ ರೂ.ಗಳ ವೆಚ್ಚದ ನಗರದ ಬೀಳೂರು ಗುರು ಬಸವ ಕಾಲೋನಿ ಮತ್ತು ರಾಜೀವ್ ಗಾಂಧಿ ಕಾಲೋನಿಗೆ ನೀರು ಸರಬರಾಜು ಮಾಡುವ 586.90 ಲಕ್ಷ ರೂ. ವೆಚ್ಚದ ಮತ್ತು ಬೀಳೂರು ಗುರುಬಸವ ಕಾಲೋನಿಯ ಒಳಚರಂಡಿ ಸೇರಿ ಒಟ್ಟು 1621.90 ಲಕ್ಷ ರೂ.ಗಳ ಕಾಮಗಾರಿಗಳಿಗೆ ಸಂಸದ ಪಿ.ಸಿ.ಗದ್ದಿಗೌಡರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಕೇಂದ್ರದ ಅಮೃತ ಯೋಜನೆಯ ಉಳಿತಾಯದ ಅನುದಾನದಲ್ಲಿ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಜೊತೆಗೆ ನಿಗದಿತ ಅವಧಿಯೊಳಗಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ನಗರಸಭೆ ಸದಸ್ಯರು ಸೇರಿದಂತೆ ವಾರ್ಡ್ನ ಗಣ್ಯರಾದ ಈರಣ್ಣ ಅಥಣಿ, ಈರಣ್ಣ ಹಲಕುರ್ಕಿ, ಚನ್ನಪ್ಪ ಅಥಣಿ, ಜ್ಯೋತಿ ಭಜಂತ್ರಿ, ರೇಖಾ
ಕಲಬುರ್ಗಿ, ಸವಿತಾ ಲಂಕೇನವರ, ಸುರೇಶ್ ಕುಂದರಗಿ, ಸಿದ್ದು ಕೋಟೆ, ಅನೀಲ್ ಅಕ್ಕಿಮರಡಿ, ರಾಜು ನಾಯ್ಕರ, ರಾಜು ರೇವಣಕರ್ ಉಪಸ್ಥಿತರಿದ್ದರು.