ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ಜರುಗಿದ ಲಕ್ಷ ದೀಪೋತ್ಸವ - Laksha deepotsava at Bagalkot

ಅಂಬಾಭವಾನಿ ದೇವಸ್ಥಾನದಲ್ಲಿ ಭಾವಸಾರ ಶಕ್ತಿ ಮಹಿಳಾ ಮಂಡಳಿ ವತಿಯಿಂದ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಜರುಗಿತು.

Laksha deepotsava at Bagalkot
ಬಾಗಲಕೋಟೆಯಲ್ಲಿ ಅದ್ಧೂರಿಯಾಗಿ ಜರುಗಿದ ಲಕ್ಷ ದೀಪೋತ್ಸವ

By

Published : Dec 15, 2019, 7:06 AM IST

ಬಾಗಲಕೋಟೆ: ನವನಗರದ 50 ಸೆಕ್ಟರ್​ನಲ್ಲಿರುವ ಭಾವಸಾರ ಕ್ಷತ್ರೀಯ ಸಮಾಜದ ಅಂಬಾಭವಾನಿ ದೇವಸ್ಥಾನದಲ್ಲಿ ಭಾವಸಾರ ಶಕ್ತಿ ಮಹಿಳಾ ಮಂಡಳಿ ವತಿಯಿಂದ ಲಕ್ಷ ದೀಪೋತ್ಸವ ಅದ್ಧೂರಿಯಾಗಿ ಜರುಗಿತು.

ಪ್ರತಿ ವರ್ಷವೂ ನಡೆಯುವ ದೀಪೋತ್ಸವದಲ್ಲಿ ಈ ಬಾರಿ ಸಮಾಜದ ಹಲವಾರು ಮಹಿಳೆಯರು ವಿವಿಧ ರಂಗೋಲಿಗಳ ಚಿತ್ತಾರ ಮೂಡಿಸಿ, ಆ ರಂಗೋಲಿಗಳಲ್ಲಿ ದೀಪಗಳನ್ನು ಬೆಳಗಿ ಸಂಭ್ರಮಪಟ್ಟರು. ದೇವಸ್ಥಾನ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿರುವ ಎರಡು ದೊಡ್ಡ ಮಂಗಲ ಕಾರ್ಯಾಲಯ ಹಾಗೂ ಹೊರಗಡೆ, ಶಂಖ, ಚಕ್ರ, ಗಧೆ, ನವಿಲು, ಕಮಲ ಸೇರಿದಂತೆ ವಿವಿಧ ಹೂಗಳ ಆಕೃತಿಯ ರಂಗೋಲಿಯ ಚಿತ್ತಾರ ಹಾಕಿದ ಮಹಿಳೆಯರು, ನಂತರ ಅದರ ಮೇಲೆ ದೀಪಗಳನ್ನು ಬೆಳಗಿದರು.

ದೀಪೋತ್ಸವದ ಅಂಗವಾಗಿ ಅಂಬಾಭವಾನಿ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರಿಗೆ ಅಭಿಷೇಕ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ನೂರಾರು ಮಹಿಳೆಯರು ದೀಪೋತ್ಸವದಲ್ಲಿ ಭಾಗಿಯಾಗಿ ದೀಪಗಳನ್ನು ಬೆಳಗಿ ಭಕ್ತಿ ಸಮರ್ಪಿಸಿದರು.

ABOUT THE AUTHOR

...view details