ಕರ್ನಾಟಕ

karnataka

ETV Bharat / state

ಚುನಾವಣೆ ಬಹಿಷ್ಕರಿಸಿ,ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ ಕುಟಕನಕೇರಿ ಗ್ರಾಮಸ್ಥರು - ಗ್ರಾಪಂ ಪುನರ್ ವಿಂಗಡಣಾ ಸಮಿತಿ

ಗ್ರಾ.ಪಂ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷರಾದ ನಂಜಯ್ಯನಮಠ‌ ವರದಿಯಲ್ಲಿ ಕುಟಕನಕೇರಿ ಗ್ರಾಮ ಪಂಚಾಯಿತಿ ರಚನೆಗೆ ಶಿಫಾರಸು ಮಾಡಲಾಗಿತ್ತು. ಈಗ ಕೆಂದೂರು ಗ್ರಾಮಕ್ಕೆ ಸೇರ್ಪಡೆಗೊಂಡ ಪರಿಣಾಮ ಆಕ್ರೋಶಗೊಂಡ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.

kuttakakeri-villagers-boycotted-the-grama-panchayat-election
ಗ್ರಾಪಂ ಚುನಾವಣೆ ಬಹಿಷ್ಕಾರ

By

Published : Dec 27, 2020, 7:09 PM IST

ಬಾಗಲಕೋಟೆ: ಜಿಲ್ಲೆಯ ಐದು ತಾಲೂಕಿನಲ್ಲಿ ಎರಡನೇ ಹಂತದ ಗ್ರಾ.ಪಂ.ಚುನಾವಣೆ ನಡೆದರೂ, ಬಾದಾಮಿ ತಾಲೂಕಿನ ಕುಟಕನಕೇರಿ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿದೆ.

ಗ್ರಾಪಂ ಚುನಾವಣೆ ಬಹಿಷ್ಕಾರ

ಕಳೆದ ಎರಡು ಅವಧಿಯಲ್ಲಿ ಗ್ರಾ.ಪಂ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಹೊಸ ಗ್ರಾ.ಪಂಚಾಯಿತಿ ರಚನೆ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಓದಿ: 2ನೇ ಹಂತದ ಗ್ರಾಮ ಸಮರ: ಒಂದೇ ಸ್ಥಾನಕ್ಕೆ ಅಣ್ಣ-ತಮ್ಮನಿಂದ ಸ್ಪರ್ಧೆ... LIVE UPDATES

ಬ್ರಿಟಿಷ್ ಆಳ್ವಿಕೆ ಕಾಲದಿಂದಲೂ ಇಲ್ಲಿ ಗ್ರಾಮ ಪಂಚಾಯಿತಿ ಇತ್ತು. ಆದರೆ ಮಂಡಲ ಪಂಚಾಯಿತಿ ಬಂದಾಗ ಬದಲಾವಣೆ ಮಾಡಿ, ಹಂಸನೂರು ಗ್ರಾಮಕ್ಕೆ ಸೇರಿಸಲಾಯಿತು. ನಂತರ‌ ಕೆಂದೂರು ಗ್ರಾಮಕ್ಕೆ ಸೇರಿಸಲಾಗಿದೆ. ಗ್ರಾ.ಪಂ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ನಂಜಯ್ಯನಮಠ‌ ವರದಿಯಲ್ಲಿ ಕುಟಕನಕೇರಿ ಗ್ರಾಮ ಪಂಚಾಯಿತಿ ಶಿಫಾರಸು ಮಾಡಲಾಗಿತ್ತು. ಈಗ ಕೆಂದೂರು ಗ್ರಾಮಕ್ಕೆ ಸೇರ್ಪಡೆಗೊಂಡ ಪರಿಣಾಮ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಕೆಂದೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮದಲ್ಲಿ ಏಳು ಸದಸ್ಯ ಸ್ಥಾನವಿದ್ದು, ಏಳು ಸ್ಥಾನಗಳಿಗೆ ಚುನಾವಣೆ ‌ಬಹಿಷ್ಕಾರ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಬಂದು ಮಾಹಿತಿ ಪಡೆದುಕೊಂಡಿದ್ದು, ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವಿ ಮಾಡಿಕೊಂಡರು.

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ವಿಧಾನಸಭೆ ಹಾಗೂ ಲೋಕಸಭೆ‌ ಚುನಾವಣೆಯಲ್ಲಿ ಗ್ರಾಮಸ್ಥರು ಮತದಾನ ಮಾಡುತ್ತಾರೆ. ಆದರೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಾತ್ರ ಮತದಾನ ಬಹಿಷ್ಕಾರ ಮಾಡುತ್ತಿದ್ದಾರೆ.

ABOUT THE AUTHOR

...view details