ಕರ್ನಾಟಕ

karnataka

ETV Bharat / state

ಅಂದು ಕೃಷ್ಣೆಯ ಅಬ್ಬರ ಇಂದು ಕೊರೊನಾದಿಂದ ತತ್ತರ:  ಸಂಕಷ್ಟದಲ್ಲಿ ಕೂಡಲಸಂಗಮದ ಜನ - Basavakalyana news

ಕೊರೊನಾ ಭೀತಿಯಿಂದ ದೇವಾಲಯ ಬಂದ್ ಆಗಿರುವುದರಿಂದ ಯಾವುದೇ ಭಕ್ತರ ಪ್ರವೇಶ ಇಲ್ಲ. ಈ ಹಿನ್ನೆಲೆ ಮತ್ತೆ ವ್ಯಾಪಾರ ವಹಿವಾಟು ಸಂಕಷ್ಟಕ್ಕೆ ಒಳಗಾಗಿದೆ.

kudalasangama-people-in-problem-from-corona
ಕೂಡಲಸಂಗಮ

By

Published : May 15, 2020, 10:49 PM IST

ಬಾಗಲಕೋಟೆ: ಈ ಹಿಂದೆ ಕೃಷ್ಣೆಯ ಅಬ್ಬರಕ್ಕೆ ಬಳಲಿದ್ದ ಕೂಡಲ ಸಂಗಮದ ಜನ ಈಗ ಕೊರೊನಾ ಭೀತಿ ನಡುವೆ ಬದುಕುವ ಪರಿಸ್ಥಿತಿ ಎದುರಾಗಿದೆ.

ಬಸವಣ್ಣನವರ ಐಕ್ಯ ಸ್ಥಳ, ಧಾರ್ಮಿಕ ಕ್ಷೇತ್ರವಾಗಿರುವ ಕೂಡಲಸಂಗಮದಲ್ಲಿನ ಜನರು ವರ್ಷದಲ್ಲಿ ಎರಡು ಬಾರಿ ತೊಂದರೆಗೆ ಸಿಲುಕಿದಂತೆ ಆಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ ಕೃಷ್ಣ, ಮಲ್ಲಪ್ರಭಾ ಹಾಗೂ ಘಟಪ್ರಭಾ ನದಿಯ ಪ್ರವಾಹದಿಂದ ಕೂಡಲಸಂಗಮವು ಸಂಪೂರ್ಣ ಮುಳಗಡೆಯಾಗಿ, ಪ್ರಮುಖ ದ್ವಾರದಿಂದ‌ ಚಿಕ್ಕಸಭಾ ಮಂಟಪದವರೆಗೆ ನೀರು ಬಂದು ಸಂಪೂರ್ಣ ಜಲಾವೃತಗೊಂಡಿತ್ತು.

ಕೂಡಲಸಂಗಮ

ಆ ವೇಳೆ, ಶ್ರಾವಣ ಮಾಸ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು ,ವ್ಯಾಪಾರ ವಹಿವಾಟು ಸಹ ಚೆನ್ನಾಗಿತ್ತು. ಒಂದು‌ ತಿಂಗಳ ಕಾಲ ಅಂಗಡಿ ಮುಂಗಟ್ಟು ಸಂಪೂರ್ಣ ಜಲಾವೃತ್ತಗೊಂಡ ಪರಿಣಾಮ ಲಕ್ಷಾಂತರ ರೂಪಾಯಿ ವ್ಯವಹಾರಕ್ಕೆ ಕೊಕ್ಕೆ ಬಿತ್ತು. ಜಲಾವೃತ್ತಗೊಂಡ ನೀರನ್ನು ಸ್ವಚ್ಛತೆ ಮಾಡಿ, ಹಾನಿಗೆ ಒಳಗಾದ ಎಲ್ಲವನ್ನೂ ಸರಿಪಡಿಸುವ ವೇಳೆಗೆ ಈಗ ಈ ಕೊರೊನಾ ಮಹಾಮಾರಿ ವಕ್ಕರಿಸಿ ಜನರ ಬದುಕನ್ನು ಸಂಕಷ್ಟಕ್ಕೆ ದೂಡಿದೆ.

ಕೂಡಲಸಂಗಮ
ಕೂಡಲಸಂಗಮ

ಕೊರೊನಾ ಭೀತಿಯಿಂದ ದೇವಾಲಯ ಬಂದ್ ಆಗಿರುವುದರಿಂದ ಯಾವುದೇ ಭಕ್ತರ ಪ್ರವೇಶ ಇಲ್ಲ. ಈ ಹಿನ್ನೆಲೆ ಮತ್ತೆ ವ್ಯಾಪಾರ ವಹಿವಾಟು ಸಂಕಷ್ಟಕ್ಕೆ ಒಳಗಾಗಿದೆ. ಸುಮಾರು 25 ಕುಟುಂಬದವರು ಇಲ್ಲಿನ ವ್ಯಾಪಾರ ವಹಿವಾಟು ಮಾಡಿಕೊಂಡು ನಿತ್ಯ ಜೀವನ ಸಾಗಿಸುತ್ತಿದ್ದರು. ಈ ಕುಟುಂಬಕ್ಕೆ ಈಗ ಯಾವುದೇ ಮೂಲಸೌಲಭ್ಯ ಇಲ್ಲದೇ ಕಷ್ಟದಲ್ಲಿ ಸಿಲುಕಿದೆ.

ಇನ್ನು ಈ ದೇವಾಲಯಕ್ಕೆ 63 ಅರ್ಚಕರ ಕುಟುಂಬದವರು‌ ಸೇವೆ ಸಲ್ಲಿಸುತ್ತಾರೆ. ಪ್ರತಿ ಐದು ದಿನಗಳಂತೆ ಒಬ್ಬರು ಅರ್ಚಕರು ಪೂಜೆ ಪುನಸ್ಕಾರ ಮಾಡುವ ಮೂಲಕ ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ, ಈಗ ಯಾವ ಕೆಲಸವೂ ಇಲ್ಲದೇ ದಿನದೂಡುವುದೇ ದುಸ್ಥರವಾಗಿದೆ.

ABOUT THE AUTHOR

...view details