ಬಾಗಲಕೋಟೆ :ಜಿಲ್ಲೆಯ ಪ್ರವಾಸಿ ತಾಣಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಹಾಗೂ ಮಹಾಕೂಟ ಪ್ರದೇಶಗಳಿಗೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರವಾಸಿ ತಾಣಗಳಿಗೆ ಕೆಎಸ್‍ಟಿಡಿಸಿ ಅಧ್ಯಕ್ಷೆ ಶೃತಿ ಭೇಟಿ, ಪರಿಶೀಲನೆ - KSTDC Chairperson Shruti latest news
ಜಿಲ್ಲೆಯ ಪ್ರವಾಸಿ ತಾಣಗಳಿಗೆ ಇಂದು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಾದಾಮಿಯ ಗುಹಾಂತರ ದೇವಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅಧ್ಯಕ್ಷರು, ಸ್ಥಳಾಂತರಗೊಳ್ಳಬೇಕಾದ ಮನೆ ಹಾಗೂ ಅದಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಂಡಿರುವ ಕಾರ್ಯ, ಹಾಕಿಕೊಂಡ ಕ್ರಿಯಾ ಯೋಜನೆಗಳ ಬಗ್ಗೆ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಅನಿಲ್ ಕುಮಾರ್ ಅವರಿಂದ ಮಾಹಿತಿ ಪಡೆದರು. ಪಟ್ಟದಕಲ್ಲು ಮತ್ತು ಐಹೊಳೆ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಯ ಮನೆಗಳ ಸ್ಥಳಾಂತರ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ವೇಳೆ ಬೆಂಗಳೂರಿನ ಸೌಂಡ್ & ಲೈಟ್ ಸಿಸ್ಟಮ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಕುಮಾರ್, ಕೆಎಸ್‍ಟಿಡಿಸಿಯ ಎಜಿಎಂ ಎಸ್.ಬಿ. ದೇಶಮುಖ, ರಾಕ್ ಕ್ಲೈಬಿಂಗ್ ಗಣೇಶ ವಡ್ಡರ ಸೇರಿದಂತೆ ಇತರರು ಇದ್ದರು.